ಕಟೀಲು:ನೂತನ ಕಲಾಮಂಟಪ ಲೋಕಾರ್ಪಣೆ
Wednesday, September 24, 2025
ಕಟೀಲು: ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಕೊಡೆತ್ತೂರುಗುತ್ತು ಕುಟುಂಬಿಕರು ಸೇವಾರೂಪದಲ್ಲಿ ನಿರ್ಮಿಸಿದ ಕಲಾಮಂಟಪವನ್ನು ಲೋಕಾರ್ಪಣೆಗೊಳಿಸಲಾಯಿತು.
ಆನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ, ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ, ಅನಂತ ಆಸ್ರಣ್ಣ, ಶ್ರೀಹರಿ ಆಸ್ರಣ್ಣ, ದೇಗುಲದ ಆಡಳಿತ ಮಂಡಳಿ ಅಧ್ಯಕ್ಷ ಕೊಡೆತ್ತೂರುಗುತ್ತು ಸನತ್ ಕುಮಾರ ಶೆಟ್ಟಿ, ಕಿಶೋರ್ ಶೆಟ್ಟ, ಬಿಪಿನ್ ಚಂದ್ರ ಶೆಟ್ಟಿ, ಉದ್ಯಮಿ ರಾಮಚಂದ್ರ ಭಟ್ ಮುಚ್ಚೂರು ಮತ್ತಿತರರಿದ್ದರು.
ದೇವರ ಎದುರು ಸಂಗೀತ, ನೃತ್ಯ ಮುಂತಾದ ಕಲಾವಿದರು ಸೇವೆಗೈಯಲು ಅವಕಾಶ ನೀಡಲಾಗಿದ್ದು, ಪ್ರತಿವಾರ ಸುಪ್ರಭಾತ, ಶುಕ್ರವಾರದ ನೃತ್ಯ ಕಾರ‍್ಯಕ್ರಮಗಳು ನಡೆಯುತ್ತಿವೆ. ಪ್ರತಿವಾರ ಭಜನೆ ನಡೆಯುತ್ತದೆ. ಈ ಎಲ್ಲ ಕಾರ‍್ಯಕ್ರಮಗಳು ಇನ್ನು ಮುಂದೆ ನಾಗನಕಟ್ಟೆ ಬಳಿಯ ಈ ಕಲಾಮಂಟಪದಲ್ಲಿ ನಡೆಯಲಿವೆ.