ಬಜಪೆ: ಜಿ.ಎಸ್.ಬಿ.ಸೇವಾ ಸಮಿತಿಯ ವತಿಯಿಂದ ವರ್ಷಂಪ್ರತಿ ಜರಗುವ ಶರನ್ನವರಾತ್ರಿಯ ಸಾಂಸ್ಕೃತಿಕ ಹಾಗೂ ಭಜನಾ ಮಹೋತ್ಸವ ಉದ್ಘಾಟನೆ
Wednesday, September 24, 2025
ಬಜಪೆ: ಜಿ.ಎಸ್.ಬಿ.ಸೇವಾ ಸಮಿತಿಯ ವತಿಯಿಂದ ವರ್ಷಂಪ್ರತಿ ಜರಗುವ ಶರನ್ನವರಾತ್ರಿಯ ಸಾಂಸ್ಕೃತಿಕ ಕಾರ್ಯಕ್ರಮವನ್ನು ಸೇವಾ ಸಮಿತಿಯ ಅಧ್ಯಕ್ಷ ಕೆ.ಸುಧಾಕರ ಕಾಮತ್ ಅವರು ದೀಪ ಪ್ರಜ್ವಲನೆ ಗೊಳಿಸಿ ಉದ್ಘಾಟಿಸಿದರು.
ಈ ಸಂದರ್ಭ ಕಾರ್ಯದರ್ಶಿ ಪಿ.ಕೆ.ಹರೀಶ್ ಪೈ ಕತ್ತಲಸಾರ್,ಎಂ ಸತೀಶ್ ಕುಡ್ವ,ಪಿ.ಕೆ.ಸತೀಶ್ ಪೈ,ಎಂ.ಏಕನಾಥ್ ಶೆಣೈ, ಕಾರ್ಯಕಾರಿ ಮಂಡಳಿಯ ಸದಸ್ಯರುಗಳು ಉಪಸ್ಥಿತರಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಬಜ್ಪೆಯ ಥಂಡರ್ ಗೈಸ್ ನೃತ್ಯ ಅಕಾಡಮಿಯ ಕಲಾವಿದರಿಂದ ನೃತ್ಯವೈಭವ ಪ್ರದರ್ಶಿಸಲ್ಪಟ್ಟಿತು.