ಕಟೀಲಿನಲ್ಲಿ ಸತ್ಯಪ್ರಮಾಣಕ್ಕಾಗಿ ಪಾದಾಯಾತ್ರೆ : ಮಿಥುನ್ ರೈ
Tuesday, September 23, 2025
ಹಳೆಯಂಗಡಿ:ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ವಿವಿಧ ಸೇವೆಗಳಿಗೆ ದರಪಟ್ಟಿಯನ್ನೇ ರಾಜಕೀಯವಾಗಿ ಬಳಸಿಕೊಂಡ ಬಿಜೆಪಿಯು ಕೊಳಕು ರಾಜಕೀಯ ಮಾಡುತ್ತಿದೆ. ದೇವರ ಹೆಸರಿನಲ್ಲಿ ಧರ್ಮವನ್ನು ಪಡೆಯುವ ಕೆಲಸ ಮಾಡುವ ಬಿಜೆಪಿಯ ಅಪಪ್ರಚಾರದ ವಿರುದ್ಧ ಸೆ.೨೬ರಂದು ಎಕ್ಕಾರು ಶ್ರೀ ಕುಂಭಕಂಠೀಣಿ ದೈವಸ್ಥಾನದಿಂದ ಕಟೀಲು ಕ್ಷೇತ್ರಕ್ಕೆ ಭಕ್ತರ ಸಮಾಗಮದೊಂದಿಗೆ ಬೃಹತ್ ಪಾದಾಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಕೆಪಿಸಿಸಿ ಕಾರ್ಯದರ್ಶಿ ಮಿಥುನ್ ರೈ ಹೇಳಿದರು.
ಅವರು ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, "ಅಸ್ತ್ರ" ಎಂಬ ಸಾಮಾಜಿಕ ಜಾಲತಾಣದ ಮೂಲಕ ಬಿಜೆಪಿಯು ಕಟೀಲು ದೇವಳದ ದರಪರಿಷ್ಕರಣೆಯ ಅಪಪ್ರಚಾರ ನಡೆಸುತ್ತಿದೆ. ದೇವಳದ ಆಡಳಿತ ಮಂಡಳಿಯ ನಿರ್ಧಾರವನ್ನು ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿಗಳ ಮೇಲೆ ಸುಳ್ಳು ಪ್ರಚಾರ ನಡೆಸುತ್ತಿರುವ ಬಿಜೆಪಿಗೆ ಬಹಿರಂಗವಾಗಿ ಸತ್ಯ ಪ್ರಮಾಣಕ್ಕೆ ಆಹ್ವಾನವನ್ನು ಈ ಪಾದಾಯಾತ್ರೆಯ ಮೂಲಕ ಧರ್ಮ ಜಾಗೃತಿಯಲ್ಲಿ ನೀಡುತ್ತಿದ್ದೇವೆ. ಭಕ್ತರ ಮನಸ್ಸಿನಲ್ಲಿ ತಪ್ಪು ಗ್ರಹಿಕೆ ಆಗಬಾರದು ಎಂಬ ಉದ್ದೇಶದಿಂದ ಈ ಪಾದಾಯಾತ್ರೆ ನಡೆಯಲಿದೆ ಎಂದರು.
ಕೆಪಿಸಿಸಿ ಸದಸ್ಯ ವಸಂತ ಬೆರ್ನಾಡ್, ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಕೋಟ್ಯಾನ್, ಮೂಡಬಿದಿರೆಯ ಪ್ರವೀಣ್‌ಕುಮಾರ್ ಜೈನ್, ಮಂಜುನಾಥ ಕಂಬಾರ, ಪುರುಂದರ ದೇವಾಡಿಗ, ರಕ್ಷಿತ್ ಪೂಜಾರಿ, ಅಶೋಕ್ ಪೂಜಾರ್ ಮತ್ತಿತರರು ಇದ್ದರು.