ತುಳುನಾಡು ಅ್ಯಡ್ ಸಂಸ್ಥೆಯಿಂದ ಕಿನ್ನಿಗೋಳಿಯಲ್ಲಿ ನೂತನ ಬಸ್ ನಿಲ್ದಾಣಕ್ಕೆ ಶಿಲಾನ್ಯಾಸ
Thursday, September 25, 2025
ಕಿನ್ನಿಗೋಳಿ:ತುಳುನಾಡ್ ಅ್ಯಡ್ ಸಂಸ್ಥೆಯ ವತಿಯಿಂದ ಕಿನ್ನಿಗೋಳಿಯ ರಾಜಾಂಗಣದ ಸಮೀಪ ನೂತನವಾಗಿ ನಿರ್ಮಾಣವಾಗಲಿರುವ ಬಸ್ ನಿಲ್ದಾಣಕ್ಕೆ ಕಿನ್ನಿಗೋಳಿ ಪಟ್ಟಣ ಪಂಚಾಯತ್ ನ ಮುಖ್ಯಾಧಿಕಾರಿ ಜಯಶಂಕರ್ ಪ್ರಸಾದ್ ಅವರು ಬುಧವಾರದಂದು ಶಿಲಾನ್ಯಾಸ ನೆರವೇರಿಸಿದರು.
ಈ ಸಂದರ್ಭ ಕಿನ್ನಿಗೋಳಿ ರೋಟರಿಕ್ಲಬ್ ನ ಅಧ್ಯಕ್ಷ ರೋ.ಸಾಯಿನಾಥ ಶೆಟ್ಟಿ,ಕಾರ್ಯದರ್ಶಿ ಪ್ರಕಾಶ್ ಆಚಾರ್ಯ,ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಕೋಟ್ಯಾನ್ ,ಕಾರ್ಯದರ್ಶಿ ಮಂಜುನಾಥ ಕಂಬಾರ,ರೋಟರಿಯ ಸದಸ್ಯರಾದ ರೋ.ದೇವಿದಾಸ ಶೆಟ್ಟಿ,ಸೀತಾರಾಮ ಶೆಟ್ಟಿ ಎಳತ್ತೂರು,ಭಾಸ್ಕರ ಅಮೀನ್ ಉಳ್ಳಂಜೆ,ಆಶ್ವಿನ್ ಆಳ್ವ ಪಕ್ಷಿಕೆರೆ,ಅನುಪ್ ಸೂರಿಂಜೆ,ತುಳುನಾಡು ಅ್ಯಡ್ ಸಂಸ್ಥೆಯ ಭವೀಷ್,ವಿಲ್ಮಾ ಡಿ ಸೋಜ ಹಾಗೂ ಮೊದಲಾದವರು ಉಪಸ್ಥಿತರಿದ್ದರು.