ರೆಡ್ ಕ್ರಾಸ್ ಮಹತ್ವ ಉಪನ್ಯಾಸ
Tuesday, September 16, 2025
ಕಟೀಲು : ೧೮೫೯ರಲ್ಲಿ ಯುದ್ಧನಡೆದಾಗ ರಣರಂಗದಲ್ಲಿ ದೇಹಗಳೆಲ್ಲ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಈ ಸಂದರ್ಭ ಗಾಯಾಳುಗಳನ್ನು ಉಪಚರಿಸುವುದಕ್ಕಾಗಿ ಸಿಡ್ಜರ್ಲೆಂಡ್ ದೇಶದ ಹೆನ್ರಿ ಡ್ಯೂನಾಂಟ್ ಗಾಯಾಳುಗಳಿಗೆ ತನ್ನಿಂದಾದ ಸೇವೆ ಸಲ್ಲಿಸಲು ಆರಂಭಿಸಿದನು. ಹೀಗೆ ಹುಟ್ಟಿಕೊಂಡ ಸಂಸ್ಥೆ ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆದಿದೆ. ಯುವಜನತೆಯಲ್ಲಿ ಉತ್ತಮ ವಿಚಾರಗಳಲ್ಲಿ ತೊಡಗಿಸಿಕೊಳ್ಳಲು ರೆಡ್ ಕ್ರಾಸ್ ಪ್ರೇರಣೆ ನೀಡುತ್ತದೆ ಎಂದು ಕಟೀಲು ಕಾಲೇಜಿನ ನಿವೃತ್ತ ಉಪನ್ಯಾಸಕ ಪ್ರೊ. ಸುರೇಶ್ ಹೇಳಿದರು. ಅವರು ಕಟೀಲು ಪದವೀಪೂರ್ವ ಕಾಲೇಜಿನಲ್ಲಿ ಜೂನಿಯರ್ ರೆಡ್ ಕ್ರಾಸ್ ಸಂಸ್ಥೆಯ ಬಗ್ಗೆ ಉಪನ್ಯಾಸ ನೀಡಿದರು.
ಕಾಲೇಜಿನ ಪ್ರಾಂಶುಪಾಲೆ ಕುಸುಮಾವತಿ, ರೆಡ್ ಕ್ರಾಸ್ ಘಟಕದ ಕೌನ್ಸಲರ್ ಸಿ. ಎಚ್. ಪರಮೇಶ್ವರ್, ಶ್ರೀಮತಿ ಅಶ್ವಿನಿ, ಜೂನಿಯರ್ ರೆಡ್ ಕ್ರಾಸ್ ಕಾರ್ಯದರ್ಶಿಗಳಾದ ಸೋಹನ್, ಭೂಮಿಕಾ ಉಪಸ್ಥಿತರಿದ್ದರು. ಮನ್ವಿತ್ ಕಾರ್ಯಕ್ರಮ ನಿರೂಪಿಸಿದರು. ಆಕಾಂಕ್ಷ ರೈ ಪರಿಚಯಿಸಿದರು. ಹಿತಾ ಪಿ. ಶೆಟ್ಟಿ ಸ್ವಾಗತಿಸಿದರು. ಸಿಂಚನ ವಂದಿಸಿದರು.