ಕಟೀಲು : ವಿಶ್ವಕರ್ಮ ಸಮಾಜ ಬಾಂಧವರ ವತಿಯಿಂದ 12ನೆಯ ವರ್ಷದ ವಿಶ್ವಕರ್ಮ ಯಜ್ಞ ಹಾಗೂ ಪೂಜಾ ಕಾರ್ಯಕ್ರಮ
Tuesday, September 16, 2025
ಕಟೀಲು : ಇಲ್ಲಿನ ವಿಶ್ವಕರ್ಮ ಸಮಾಜ ಬಾಂಧವರ ವತಿಯಿಂದ 12ನೆಯ ವರ್ಷದ ವಿಶ್ವಕರ್ಮ ಯಜ್ಞ ಹಾಗೂ ಪೂಜಾ ಕಾರ್ಯಕ್ರಮ ಕಟೀಲು ದೇವರಗುಡ್ಡೆ ದುರ್ಗಾಗಣೇಶ ಸಭಾಗೃಹದಲ್ಲಿ ಜರಗಿತು. ಈ ಸಂದರ್ಭದಲ್ಲಿ ನಿವೃತ್ತ ಅಧ್ಯಾಪಕ ಸದಾಶಿವ ಆಚಾರ್ಯರನ್ನು ಸನ್ಮಾನಿಸಲಾಯಿತು. ಪುರೋಹಿತ ಲೋಕೇಶ್ ಆಚಾರ್ಯ, ಕಟೀಲು ವಿಶ್ವಕರ್ಮ ಕೂಡುವಳಿಕೆಯ ಸುಧಾಕರ ಆಚಾರ್ಯ, ಗಣೇಶ ಆಚಾರ್ಯ, ನಾರಾಯಣ ಆಚಾರ್ಯ, ಶಿವರಾಮ ಆಚಾರ್ಯ, ಚಂದ್ರಯ ಆಚಾರ್ಯ, ಗುರುರಾಘವೇಂದ್ರ ಆಚಾರ್ಯ, ದೇವಿಪ್ರಸಾದ ಆಚಾರ್ಯ ಉಪಸ್ಥಿತರಿದ್ದರು.