ಕಟೀಲು ಕಾಲೇಜು ವಿದ್ಯಾರ್ಥಿ ಸಂಘ ಉದ್ಘಾಟನೆ
Thursday, September 18, 2025
ಕಟೀಲು : ಶೈಕ್ಷಣಿಕ ಸಾಧನೆಯೊಂದಿಗೆ ನಾಯಕತ್ವ, ಸಮಾಜಮುಖಿ ಚಿಂತನೆಯನ್ನು ಯುವಕರು ಬೆಳೆಸಿಕೊಳ್ಳಬೇಕು ಎಂದು ಎಜೆ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸಂಸ್ಥೆಯ ನಿರ್ದೇಶಕ ಡಾ. ಟಿ. ಜಯಪ್ರಕಾಶ್ ರಾವ್ ಹೇಳಿದರು.
ಅವರು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಿ ಮಾತನಾಡಿದರು.
ಕಟೀಲು ದೇಗುಲದ ಅರ್ಚಕ ವೆಂಕಟರಮಣ ಆಸ್ರಣ್ಣ, ಕಟೀಲು ದೇಗುಲದ ಆಡಳಿತ ಮಂಡಳಿ ಅಧ್ಯಕ್ಷ ಕೊಡೆತ್ತೂರುಗುತ್ತು ಸನತ್ ಕುಮಾರ ಶೆಟ್ಟಿ, ಹಳೆ ವಿದ್ಯಾರ್ಥಿ ಸಂಘದ ಪ್ರಕಾಶ್ ಕುಕ್ಯಾನ್, ಪ್ರಾಚಾರ್ಯರಾದ ಡಾ.ವಿಜಯ್ ವಿ. ಉಪನ್ಯಾಸಕರಾದ ಡಾ. ಪದ್ಮನಾಭ ಮರಾಠೆ, ಪ್ರದೀಪ್ ಡಿ.ಎಂ., ವಿದ್ಯಾರ್ಥಿ ಮುಖಂಡರಾದ ಕಾರ್ತಿಕ್ ಎಸ್. ನಾಯ್ಕ್, ತರುಣ್ ಡಿ. ದೇವಾಡಿಗ, ಕೃಪಾ ಟಿ. ಶೆಟ್ಟಿ, ಪ್ರಾರ್ಥನಾ ಮತ್ತಿತರರಿದ್ದರು.