ಪರಿಸರ ಜಾಗೃತಿ ಗಿಡಗಳ ಸಂರಕ್ಷಣೆ ಮಾಹಿತಿ ಕಾರ್ಯಕ್ರಮ
Monday, August 4, 2025
ಸುರತ್ಕಲ್ :ಎಂ.ಸಿ.ಎಪ್ ಪಣಂಬೂರು ಸಹಯೋಗದೊಂದಿಗೆ ರಂಗ ಚಲನ ತಂಡ ಮಂಗಳೂರು ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಮಧ್ಯ ಇಲ್ಲಿ ಪರಿಸರ ಜಾಗೃತಿ ಗಿಡಗಳ ಸಂರಕ್ಷಣೆ ಮಾಹಿತಿ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮಕ್ಕೆ ಮುಂಬಯಿ ಉದ್ಯಮಿ ಕರುಣಾಕರ ಎಂ ಶೆಟ್ಟಿ ಮಧ್ಯಗುತ್ತು ಚಾಲನೆ ನೀಡಿದರು ವಿದ್ಯಾನಿಧಿ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ, ಶಾಲಾಭಿವೃದ್ದಿ ಸಮಿತಿ ಮಾಜಿ ಅಧ್ಯಕ್ಷ ಭಗವಾನ್, ಸದಸ್ಯರಾದ ಅನಿಲ್ ಸಾಲ್ಯಾನ್ ಸೂರಿಂಜೆ,ತುಳು ಚಲನಚಿತ್ರ ನಟಿ ಚಿತ್ರ ಭಗವಾನ್ ,ರಂಗ ಕಲಾವಿದ ದಿನೇಶ್ ಅತ್ತಾವರ,ಅಶ್ವಿನ್ ಶೆಟ್ಟಿ ಮಧ್ಯ, ಶಾಲೆ ಹಿರಿಯ ಶಿಕ್ಷಕಿ ಅಹಲ್ಯ ಮುಂತಾದವರು ಉಪಸ್ಥಿತರಿದ್ದರು.