ಶಾಮಿಯಾನ ಸಂಯೋಜನೆ ಸೇವಾ ಟ್ರಸ್ಟ್ (ರಿ.) ಕಿನ್ನಿಗೋಳಿ, ಮುಲ್ಕಿ ವಲಯ ಇದರ 17 ನೇ ವರ್ಷದ ವಾರ್ಷಿಕೋತ್ಸವ
Tuesday, August 5, 2025
ಕಿನ್ನಿಗೋಳಿ :ಶಾಮಿಯಾನ ಸಂಯೋಜನೆ ಸೇವಾ ಟ್ರಸ್ಟ್ (ರಿ.) ಕಿನ್ನಿಗೋಳಿ, ಮುಲ್ಕಿ ವಲಯ ಇದರ 17 ನೇ ವರ್ಷದ ವಾರ್ಷಿಕೋತ್ಸವ ಪುನರೂರು ನಾಗವೀಣಾ ಸಭಾಂಗಣದಲ್ಲಿ ಒಕ್ಕೂಟದ ಅಧ್ಯಕ್ಷ ಹರಿದಾಸ್ ಎಕ್ಕಾರ್ ಇವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಲಾಯಿತು.
ಪೂಜಾ ಎರೇಂಜರ್ಸ್,ಹಳೆಯಂಗಡಿಯ ಜಯಕೃಷ್ಣ , ಸುರೇಶ್ ಸುವರ್ಣ ಐಕಳ,ದಿನೇಶ್ ಸಾಗರಿಕ ಎರೇಂಜರ್ಸ್, ಸುದರ್ಶನ್ ಸುರಗಿರಿ ಎರೇಂಜರ್ಸ್, ಸದಾಶಿವ ಶೆಟ್ಟಿಗಾರ್ ದುರ್ಗಾ ಎರೇಂಜರ್ಸ್, ದಿನೇಶ್ ಶೆಟ್ಟಿಗಾರ್, ಜಗನ್ನಾಥ ನಾಯಕ್,ಸ್ಟೇನಿ ರೇಗೊ, ಸತೀಶ್ ಕೋಟ್ಯಾನ್,ನಂದೇಶ್,ಮಲ್ಲಿಕ್ ಮತ್ತಿತರರು ಉಪಸ್ಥಿತರಿದ್ದರು.ಒಕ್ಕೂಟದ ಮಾಲಕರು ಹಾಗೂ ನೌಕರರಿಗೆ ಅಂಚೆ ವಿಮೆಯನ್ನು ಈ ವೇಳೆ ವಿತರಿಸಲಾಯಿತು.
ಜಗನ್ನಾಥ ನಾಯಕ್ ಕಾರ್ಯಕ್ರಮ ನಿರೂಪಿಸಿ, ಸ್ಟೇನಿ ರೇಗೊ ಸ್ವಾಗತಿಸಿ ಧನ್ಯವಾದವಿತ್ತರು.