ಭ್ರಾಮರೀ ಮಹಿಳಾ ಸಮಾಜ (ರಿ.) ಮೆನ್ನಬೆಟ್ಟು ಕಿನ್ನಿಗೋಳಿ ಇದರ 18 ನೇ ವಾರ್ಷಿಕೋತ್ಸವ ಹಾಗು ಆಟಿಡ್ ಪಡ್ಸಲೆದ ಪೊರ್ಲು ಕಾರ್ಯಕ್ರಮ
Tuesday, August 5, 2025
ಕಿನ್ನಿಗೋಳಿ:ಭ್ರಾಮರೀ ಮಹಿಳಾ ಸಮಾಜ (ರಿ.) ಮೆನ್ನಬೆಟ್ಟು ಕಿನ್ನಿಗೋಳಿ ಇದರ 18 ನೇ ವಾರ್ಷಿಕೋತ್ಸವ ಹಾಗು ಆಟಿಡ್ ಪಡ್ಸಲೆದ ಪೊರ್ಲು ಕಾರ್ಯಕ್ರಮ ರಾಜರತ್ನಪುರ ಸರಾಪ್ ಅಣ್ಣಯ್ಯಾಚಾರ್ಯ ಸಭಾಭವನದಲ್ಲಿ ನಡೆಯಿತು.
ಕಿನ್ನಿಗೋಳಿ ಯುಗಪುರುಷದ ಪ್ರಧಾನ ಸಂಪಾದಕ ಭುವನಾಭಿರಾಮ ಉಡುಪ ಅವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಭ್ರಾಮರೀ ಮಹಿಳಾ ಸಮಾಜ (ರಿ.), ಮೆನ್ನಬೆಟ್ಟು ಇದರ ಗೌರವಾಧ್ಯಕ್ಷ ಶ್ರೀಮತಿ ಸಾವಿತ್ರಿ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳ ಪ್ರೌಢಶಾಲೆಯ ತುಳು ಶಿಕ್ಷಕಿ ಶ್ರೀಮತಿ ಸುಷ್ಮಾ ದುರ್ಗಾಪ್ರಸಾದ್ ಆಟಿ ಆಚರಣೆಯ ಬಗ್ಗೆ ಮಾಹಿತಿ ನೀಡಿದರು.
ಶ್ರೀಮತಿ ಬಬಿತಾ ನರೇಶ್ ರವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.ಶ್ರೀಮತಿ ಅನೂಷ ಕರ್ಕೆರಾ ಸನ್ಮಾನ ಪತ್ರ ವಾಚಿಸಿದರು.
ಮುಖ್ಯ ಅತಿಥಿಗಳಾಗಿ ಸರಾಫ್ ಅಣ್ಣಯ್ಯಾಚಾರ್ಯ ಸಭಾಭವನ ಸಮಿತಿ ರಾಜರತ್ನಪುರದ ಅಧ್ಯಕ್ಷ ಪೃಥ್ವಿರಾಜ್ ಆಚಾರ್ಯ, ಆದರ್ಶ ಬಳಗ (ರಿ.),ಕೊಡೆತ್ತೂರುವಿನ ಅಧ್ಯಕ್ಷ ಯುವರಾಜ ಶೆಟ್ಟಿ, ವಿಶ್ವ ಬ್ರಾಹ್ಮಣ ಸಮಾಜ ಸೇವಾ ಸಂಘ (ರಿ.), ಕಿನ್ನಿಗೋಳಿಯ ಅಧ್ಯಕ್ಷ ಜಗದೀಶ್ ಆಚಾರ್ಯ, ಪ್ರಭಾಕರ ಆಚಾರ್ಯ,ಸಾರ್ವಜನಿಕ ಶ್ರೀ ಬಾಲಗಣೇಶೋತ್ಸವ ಸಮಿತಿ (ರಿ.), ರಾಜರತ್ನಪುರದ ಅಧ್ಯಕ್ಷ ಸತೀಶ್ ಪೂಜಾರಿ, ಭ್ರಾಮರೀ ಮಹಿಳಾ ಸಮಾಜದ ಅಧ್ಯಕ್ಷೆ ಶ್ರೀಮತಿ ಮೀರಾ ಶೆಟ್ಟಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಸ್ಥಳೀಯ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ನಡೆಯಿತು.
ಅಂಗನವಾಡಿ ಶಿಕ್ಷಕಿ ಶ್ರೀಮತಿ ಸಂಧ್ಯಾ ಕಾರ್ಯಕ್ರಮ ನಿರೂಪಿಸಿ, ಶ್ರೀಮತಿ ಮೀರಾ ಶೆಟ್ಟಿ ಸ್ವಾಗತಿಸಿ, ಶ್ರೀಮತಿ ಅಮಿತಾ ವಂದಿಸಿದರು.