ತುಳು ಪರಿಷತ್ ಮಂಗಳೂರು ವತಿಯಿಂದ ಆಟಿದ ಕೂಟ ಕಾರ್ಯಕ್ರಮ
Tuesday, August 5, 2025
ಗೋವಿಂದ ದಾಸ್ ಪದವಿ ಕಾಲೇಜು ನಿವೃತ್ತ ಪ್ರಾಂಶುಪಾಲ ಕೃಷ್ಣಮೂರ್ತಿ ರವರು ಕಾರ್ಯಕ್ರಮ ಉದ್ಘಾಟಿಸಿ ತುಳು ಭಾಷೆ ಮತ್ತು ತುಳು ಸಂಸ್ಕೃತಿಯ ಹಾಗೂ ತುಳುನಾಡಿನ ಪುರಾತನ ದೇವಾಲಯದ ಇತಿಹಾಸಗಳ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ತುಳು ಪರಿಷತ್ ಅಧ್ಯಕ್ಷ ಶುಭೋದಯ ಆಳ್ವ ಅವರು ಆಟಿ ತಿಂಗಳು ತುಂಬಾ ಕಷ್ಟದ ಸಮಯವಾಗಿತ್ತು. ಕೃಷಿ ಬದುಕಿನ ಮದ್ಯೆ ಬಡತನದ ಮಧ್ಯೆಯೂ ಜನರೂ ಸಂಸ್ಕಾರ ಯುತ ಜೀವನ ನಡೆಸುತ್ತಿದ್ದರು. ತುಳು ಭಾಷೆ ಮತ್ತು ಸಂಸ್ಕೃತಿ ಯನ್ನು ಉಳಿಸಲು ಪ್ರತಿ ತಿಂಗಳು ಕಾರ್ಯಕ್ರಮವನ್ನು ನಡೆಸುತಿದ್ದೇವೆ ಎಂದು ಹೇಳಿದರು.
ತುಳು ಪರಿಷತ್ ಮಂಗಳೂರು ಗೌರವಧ್ಯಕ್ಷ ಡಾ. ಪ್ರಭಾಕರ್ ನೀರುಮಾರ್ಗ ಮಾತನಾಡಿ ತುಳು ಭಾಷೆ ಮತ್ತು ತುಳು ಸಂಸ್ಕೃತಿಯನ್ನು ಉಳಿಸಿ, ಬೆಳೆಸಲು ರಾಜಕೀಯ ರಹಿತವಾಗಿ ಕೆಲಸ ಮಾಡಬೇಕು. ಪದವಿ ತರಗತಿಯಲ್ಲಿ ತುಳು ತೃತೀಯ ಭಾಷೆಯಾಗಿ ನಾನು ಮತ್ತು ಈಗಿನ ಅಧ್ಯಕ್ಷರಾದ ತಾರಾನಾಥ್ ಗಟ್ಟಿ ಜೊತೆ ಶ್ರಮಿಸಿದ್ದೇನೆ. ಹಾಗೂ ಪಿಯು ಸಿ ಯಲ್ಲಿ ತೃತೀಯ ಭಾಷೆಯಾಗಿ ತುಳುವನ್ನು ಅಳವಡಿಸಲು ಪ್ರಯತ್ನ ನಡೆಸಿದ್ದೇವೆ ಹಾಗೂ ಎಲ್ಲರೂ ಪ್ರಯತ್ನ ಪಡಬೇಕೆಂದು ಕರೆಯಿತ್ತರು.
ಈ ಸಂದರ್ಭ ನಾಗೇಶ್, ಚಂದ್ರಕಲಾ ರಾವ್, ಸುಮತಿ ಹೆಗ್ಡೆ, ಶಾಲಿನಿ ರೈ, ಅಮಿತಾ ಅಶ್ವಿನ್ ಉಳ್ಳಾಲ್,ವಿನುತಾ, ಶ್ರೀನಿವಾಸ್, ರಾಕೇಶ್ ಕುಂದರ್, ರಮೇಶ್ ಮಂಚಕಲ್, ಶಾರದಾ ಬಾರ್ಕುರೂ, ವಿನಯ್, ದುರ್ಗಾ ಪ್ರಸಾದ್, ರೇಖಾ ಶೆಟ್ಟಿ, ವನಿತಾ, ನ್ಯಾನ್ಸಿ ನೋರೋನ್ಹ, ಆಶಾ,ಜ್ಯೋತಿ, ಸನ್ನಿಧಿ, ಉಪಸ್ಥಿತರಿದ್ದರು.
ತುಳು ಪರಿಷತ್ ಪ್ರಧಾನ ಕಾರ್ಯದರ್ಶಿ ಬೆನೆಟ್ ಅಮ್ಮನ್ನ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.