ಮೊಳಹಳ್ಳಿ ಶಿವರಾಯರ 145 ನೇ ಜನ್ಮ ದಿನಾಚರಣೆ ಕಾರ್ಯಕ್ರಮ
Monday, August 4, 2025
ಹಳೆಯಂಗಡಿ:ಮೊಳಹಳ್ಳಿ ಶಿವರಾಯರ ಸಹಕಾರಿ ಚಳವಳಿ ಕರಾವಳಿ ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗಿ ಅವಿಭಾಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಹಕಾರಿ ಚಳುವಳಿಯನ್ನು ಪ್ರಾರಂಭಿಸಿ ಇಂದು ಸಹಕಾರಿ ರಂಗವು ಇಷ್ಟು ಬಲಿಷ್ಠವಾಗಿ ಇರಬೇಕಾದರೆ ಸಹಕಾರಿ ಪಿತಾಮಹ ದಿವಂಗತ ಮೊಳಹಳ್ಳಿ ಶಿವರಾಯರೇ ಕಾರಣ ಎಂದು ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಎಚ್ ವಸಂತ್ ಬೆರ್ನಾರ್ಡ್ ಹೇಳಿದರು.
ಅವರು ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿಯ ಪ್ರಧಾನ ಕಚೇರಿಯಲ್ಲಿ ಮೊಳಹಳ್ಳಿ ಶಿವರಾಯರ 145 ನೇ ಜನ್ಮ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭ ಪಾವಂಜೆ ಶ್ರೀ ಮಹಾಗಣಪತಿ ದೇವಸ್ಥಾನದ ಆಡಳಿತ ಮೊಕ್ತೇಸ ಬಿ. ಸೂರ್ಯಕುಮಾರ್, ನಿರ್ದೇಶಕರಾದ ಉಮಾನಾಥ್ ಜೆ. ಶೆಟ್ಟಿಗಾರ್, ನವೀನ್ ಸಾಲಿಯಾನ್ ಪಂಜ, ಶಾಖಾ ಪ್ರಬಂಧಕ ಪ್ರಜ್ಞಾಶ್ರೀ, ಅಭಿಷ್ಠಾ ಜೈನ್, ಸಿಬ್ಬಂದಿಗಳಾದ ಸಿತಾರ ಕೋಟ್ಯಾ ನ್, ಪ್ರತೀಕ್ ಪಿ, ಅಕ್ಷಯ್, ನಂದಿತಾ ವಿ ಪದ್ಮಶಾಲಿ, ರೇಷ್ಮಾ ಕುಮಾರಿ, ವಿನಿತ ವಿಲ್ಮಾ ಕೈರನ್ನ, ಪ್ರಕಾಶ್ ಚಂದ್ರ ಶೆಟ್ಟಿಗಾರ್, ಚಿಂತನ್ ಶೆಟ್ಟಿ ಉಪಸ್ಥಿತರಿದ್ದರು.
ಮುಖ್ಯಕಾರ್ಯನಿರ್ವಹಣಾಧಿಕಾರಿಸುದರ್ಶನ್ ರವರು ಸ್ವಾಗತಿಸಿ, ಲೆಕ್ಕಿಗರಾದ ಲೋಲಾಕ್ಷಿ ಅವರು ವಂದಿಸಿದರು.ಸಾಲ ವಿಭಾಗದ ಪ್ರಬಂಧಕಿ ಶ್ರೀಮತಿ ಅಕ್ಷತಾ ಶೆಟ್ಟಿ ಎಂ ಕಾರ್ಯಕ್ರಮ ನಿರೂಪಿಸಿದರು.