ಯಕ್ಷಲಹರಿ (ರಿ.) ಯುಗಪುರುಷ ಕಿನ್ನಿಗೋಳಿ, 35 ನೇ ವರ್ಷದ ಸಂಭ್ರಮ ಕರ್ನಾಟಕ ಬ್ಯಾಂಕ್ ಯಕ್ಷಗಾನ ತಾಳಮದ್ದಳೆ ಸ್ಪರ್ಧಾ ಸಪ್ತಾಹ ಶ್ರೀ ರಾಮಾ ಕಥಾಮಾಲಿಕಾ, ಇದರ ಸಮಾರೋಪ ಸಮಾರಂಭ
Monday, August 4, 2025
ಕಿನ್ನಿಗೋಳಿ:ಯಕ್ಷಲಹರಿ (ರಿ.) ಯುಗಪುರುಷ ಕಿನ್ನಿಗೋಳಿ ಯಕ್ಷಲಹರಿಯ 35 ನೇ ವರ್ಷದ ಸಂಭ್ರಮ ಕರ್ನಾಟಕ ಬ್ಯಾಂಕ್ ಯಕ್ಷಗಾನ ತಾಳಮದ್ದಳೆ ಸ್ಪರ್ಧಾ ಸಪ್ತಾಹ ಶ್ರೀ ರಾಮಾ ಕಥಾಮಾಲಿಕಾ ಇದರ ಸಮಾರೋಪ ಸಮಾರಂಭ ಯುಗಪುರುಷ ಸಭಾಭವನದಲ್ಲಿ ಭಾನುವಾರದಂದುಇ ನಡೆಯಿತು.
ಕಟೀಲು ದೇವಳದ ಪ್ರಧಾನ ಅರ್ಚಕರಾದ ವೇ|ಮೂ| ಶ್ರೀ ಲಕ್ಷ್ಮೀನಾರಾಯಣ ಆಸ್ರಣ್ಣ ಅವರು ಕಾರ್ಯಕ್ರಮನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೂಡಬಿದಿರೆಯ ಧನಲಕ್ಷ್ಮೀ ಕ್ಯಾಶ್ಶೂ ಎಕ್ಸ್ಪೋರ್ಟ್ ನ ಮಾಲಕ ಕೆ.ಶ್ರಿಪತಿ ಭಟ್ ವಹಿಸಿದ್ದರು.
ವೇ|ಮೂ| ವೇದವ್ಯಾಸ ತಂತ್ರಿ,ತಂತ್ರಿವರೇಣ್ಯರು, ಶಿಬರೂರು ಶುಭಾಶಂಸನೆಗೈದರು.
ಅಗರಿ ಸಮೂಹ ಸಂಸ್ಥೆಗಳ ಮಾಲಕ ಅಗರಿ ರಾಘವೇಂದ್ರ ರಾವ್ ಅವರು ವಿದ್ಯಾರ್ಥಿ ವೇತನವನ್ನು ವಿತರಿಸಿದರು.
ಮಹಾವೀರ ಪಾಂಡಿ ಕಾಂತಾವಾರ, ಇವರಿಗೆ ಕಲಾವಿದ ಸನ್ಮಾನ ನೀಡಲಾಯಿತು.ಶ್ರೀಮತಿ ದೀಪ್ತಿ ಬಾಲಕಷ್ಣ ಭಟ್ ಸನ್ಮಾನ ಪತ್ರ ವಾಚಿಸಿದರು.
ಶ್ರೀಮತಿ ರತ್ನಾ ಎಸ್.ಕೋಟ್ಯಾನ್ ದಾಮಸ್ಕಟ್ಟೆ ಇವರಿಗೆ ಕಲಾಪೋಷಕ ಸನ್ಮಾನ ಮಾಡಲಾಯಿತು.
ಭುವನಾಭಿರಾಮ ಉಡುಪ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಕ.ಸಾ.ಪ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಡಾ.ಹರಿಕೃಷ್ಣ ಪುನರೂರು, ಮಂಗಳೂರು ಕಲ್ಕೂರ ಪ್ರತಿಷ್ಠಾನದ ಪ್ರದೀಪ್ ಕುಮಾರ್ ಕಲ್ಕೂರ, ನಮ್ಮ ಕುಡ್ಲ ವಾಹಿನಿಯ ಆಡಳಿತ ನಿರ್ದೇಶಕ ಲೀಲಾಕ್ಷ ಕರ್ಕೇರಾ,ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಎಚ್.ವಿ ರಾಘವೇಂದ್ರ ರಾವ್, ಎಂ ಅರ್ ಪಿಎಲ್ ನ ಮಾನವ ಸಂಪನ್ಮೂಲ ಅಧಿಕಾರಿ ಸ್ಟೀವನ್ ಪಿಂಟೋ, ಪ್ರಭಾತ್ ಜ್ಯುವೆಲರ್ಸ್ ನ ಮಾಲಕ ನಾಗರಾಜ ಆಚಾರ್ಯ, ಕಿನ್ನಿಗೋಳಿ ಯುಗಪುರುಷದ ಭುವನಾಭಿರಾಮ ಉಡುಪ, ಸುರತ್ಕಲ್ ನ ಓರಿಯಂಟಲ್ ಇನ್ಸೂರೆನ್ಸ್ ಕಂಪನಿಯ ಶಾಖಾಪ್ರಬಂಧಕ ಯಾದವ ದೇವಾಡಿಗ, ಪಿಡಿಓ ಉಗ್ಗಪ್ಪ ಮೂಲ್ಯ,ಯಕ್ಷಲಹರಿಯ ಪದಾಧಿಕಾರಿಗಳು ಸರ್ವ ಸದಸ್ಯರು ಉಪಸ್ಥಿತರಿದ್ದರು.
ವಸಂತ ದೇವಾಡಿಗ, ಪಶುಪತಿ ಶಾಸ್ತ್ರಿ ಕಾರ್ಯಕ್ರಮ ನಿರೂಪಿಸಿದರು.