ಪಾವಂಜೆ ದೇವಾಡಿಗ ಭವನದಲ್ಲಿ ಆಟಿಡೊಂಜಿ ಐತಾರ ಕಾರ್ಯಕ್ರಮ
Monday, August 11, 2025
ಹಳೆಯಂಗಡಿ: ದೇವಾಡಿಗ ಸಮಾಜ ಸೇವಾ ಸಂಘ ಪಾವಂಜೆ, ದೇವಾಡಿಗ ಮಹಿಳಾ ವೇದಿಕೆ, ದೇವಾಡಿಗ ಯುವ ವೇದಿಕೆ, ದೇವಾಡಿಗ ಸೇವಾ ಟ್ರಸ್ಟ್ ಪಾವಂಜೆ ಆಶ್ರಯದಲ್ಲಿ ಪಾವಂಜೆಯ ದೇವಾಡಿಗ ಭವನದಲ್ಲಿ ಭಾನುವಾರ ಆಟಿಡೊಂಜಿ ಐತಾರ ಕಾರ್ಯಕ್ರಮವು ನಡೆಯಿತು.
ಉಡುಪಿ ಲೋಕೋಪಯೋಗಿ ಇಲಾಖೆಯ ನಿವೃತ್ತ ಎಇಇ ಚೆನ್ನಪ್ಪ ಮೊಯ್ಲಿ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಪಾವಂಜೆ ದೇವಾಡಿಗ ಸಮಾಜ ಸೇವಾ ಸಂಘದ ಅಧ್ಯಕ್ಷ ಅಣ್ಣಪ್ಪ ದೇವಾಡಿಗ ಪಕ್ಷಿಕೆರೆ ಅವರು ಕಾರ್ಯಕ್ರಮನ್ನು ಉದ್ಘಾಟಿಸಿದರು.
ಮಂಗಳೂರಿನ ರಥಬೀದಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕಿ ಡಾ. ಜ್ಯೋತಿ ಪ್ರಿಯಾ 'ಆಟಿದ ಮದಿಪು' ನೀಡಿದರು. ಪಾವಂಜೆ ದೇವಾಡಿಗ ಮಹಿಳಾ ವೇದಿಕೆಯ ಅಧ್ಯಕ್ಷೆ ವಿಜಯಲಕ್ಷ್ಮಿ ಜನಾರ್ದನ ದೇವಾಡಿಗ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ಕಲ್ಮಾಡಿ ಬಗ್ಗು ಪಂಜುರ್ಲಿ ಕುಟುಂಬದ ಸುರೇಶ್ ಕೊಡವೂರು ಕಲ್ಮಾಡಿ, ಪ್ರಮುಖರಾದ ರವಿರಾಜ್, ಸಂಘದ ಕಟ್ಟಡ ಸಮಿತಿ ಕಾರ್ಯದರ್ಶಿ ಯಾದವ ದೇವಾಡಿಗ, ದೇವಾಡಿಗ ಸೇವಾ ಟ್ರಸ್ಟ್ ಅಧ್ಯಕ್ಷ ರಮೇಶ್ ತೋಕೂರು, ಉಪಾಧ್ಯಕ್ಷ ಜನಾರ್ದನ ಪಡು ಪಣಂಬೂರು, ವಿಠಲ ದೇವಾಡಿಗ ಅರಂದು ಮೊದಲಾದವರು ಉಪಸ್ಥಿತರಿದ್ದರು.ತುಳಸಿ ಸತೀಶ್ ಸ್ವಾಗತಿಸಿದರು. ಮಂಜುಳಾ ಕಾರ್ಯಕ್ರಮ ನಿರೂಪಿಸಿದರು.ಜಯಶ್ರೀ ಯಾದವ್ ವಂದಿಸಿದರು.
ಕಾರ್ಯಕ್ರಮದಲ್ಲಿ ಸಭಿಕರಿಗೆ ಸುಮಾರು 32 ಬಗೆಯ ಆಟಿಯ ಖಾದ್ಯಗಳನ್ನು ಉಣಬಡಿಸಲಾಯಿತು.