-->
ಸರಕಾರಿ ಪ್ರೌಢಶಾಲೆ ಬಡಗ ಎಕ್ಕಾರು , ಬೆಂಕಿ ನಂದಕದ ಪ್ರಾತ್ಯಕ್ಷತೆ

ಸರಕಾರಿ ಪ್ರೌಢಶಾಲೆ ಬಡಗ ಎಕ್ಕಾರು , ಬೆಂಕಿ ನಂದಕದ ಪ್ರಾತ್ಯಕ್ಷತೆ

ಬಜಪೆ:ಸರಕಾರಿ ಪ್ರೌಢಶಾಲೆ ಬಡಗ ಎಕ್ಕಾರು ಇಲ್ಲಿ ವಿದ್ಯಾರ್ಥಿಗಳಿಗೆ ಬೆಂಕಿ ನಂದಕದ ಪ್ರಾತ್ಯಕ್ಷಿಕೆಯನ್ನು ನೀಡುವ ಕಾರ್ಯಕ್ರಮವು ಸೋಮವಾರದಂದು ನಡೆಯಿತು. ಶಾಲಾ ಪರಿಸರದಲ್ಲಿ ಅಗ್ನಿ ಅವಘಡದ ಸಂದರ್ಭದಲ್ಲಿ ವಿದ್ಯಾರ್ಥಿಗಳು ಅಗ್ನಿ ನಂದಕವನ್ನು ಬಳಸುವಲ್ಲಿ ಮನೋಸ್ಥೈರ್ಯವನ್ನು ತುಂಬುವಂತೆ ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆಯ ಮೂಲಕ ಮಾಹಿತಿಗಳನ್ನು  ನೀಡಲಾಯಿತು. ಸೋಡಿಯಂ ಬೈಕಾರ್ಬೋನೇಟ್ ಅಥವಾ ಪೋಟಾಸಿಯಂ ಬೈಕಾರ್ಬೋನೇಟ್ ನಂತಹ ರಾಸಾಯನಿಕಗಳ ಶುಷ್ಕ ಪುಡಿಯನ್ನು ಈ ಬೆಂಕಿ ನಂದಕದಲ್ಲಿ ಬಳಸುತ್ತಾರೆ. ಈ ಅಗ್ನಿ ನಂದಕದಿಂದ ಬಿಡುಗಡೆಯಾದ CO2(ಕಾರ್ಬನ್ ಡೈಯಾಕ್ಸೈಡ್) ಬೆಂಕಿಯ ಸುತ್ತ ಹೊದಿಕೆಯಂತಾಗುವುದಲ್ಲದೆ ಇಂಧನದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ. ಎಂಬ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ನೀಡಲಾಯಿತು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ