ಮುಲ್ಕಿ ಹೋಬಳಿ ಮಟ್ಟದ ಬಾಲಕರ ವಾಲಿಬಾಲ್ ಪಂದ್ಯಾವಳಿ,ಎಸ್ ಎನ್ ಜಿ ತಂಡ ತಾಲೂಕು ಮಟ್ಟಕ್ಕೆ ಆಯ್ಕೆ
Friday, August 8, 2025
ಮೂಲ್ಕಿ:ಮುಲ್ಕಿ ಹೋಬಳಿ ಮಟ್ಟದ ಬಾಲಕರ 17 ರ ವಯಾಮಿತಿಯ ವಾಲಿಬಾಲ್ ಪಂದ್ಯಾವಳಿಯು ಶ್ರೀ ರಾಮಣ್ಣ ಶೆಟ್ಟಿ ಇಂಗ್ಲಿಷ್ ಮೀಡಿಯಂ ಸ್ಕೂಲ್ ತೋಕೂರಿನಲ್ಲಿ ನಡೆಯಿತು. ಪಂದ್ಯಾವಳಿಯಲ್ಲಿ ಬಾಲಕರ 20 ತಂಡಗಳು ಭಾಗವಹಿಸಿದ್ದವು. ಎಸ್ ಎನ್ ಜಿ ತಂಡ ಪ್ರಥಮ ಸ್ಥಾನ ಪಡೆದು ತಾಲೂಕ ಮಟ್ಟಕ್ಕೆ ಆಯ್ಕೆಯಾಗಿದೆ. ಫೈನಲ್ ಪಂದ್ಯಾವಳಿಯಲ್ಲಿ ಎಸ್ಎನ್‌ಜಿ ಹಾಗೂ ಎದುರಾಳಿ ತಂಡ ಅನ್ಸಾರಿ ಪ್ರೌಢಶಾಲೆ ಬಜ್ಪೆ ಇವರನ್ನು 2-1 ಸೆಟ್ಟಿನಲ್ಲಿ ಸೋಲಿಸಿ ವಿಜಯದ ಮಾಲೆಯನ್ನು ಎಸ್ ಎನ್ ಜಿ ತಂಡ ಪಡೆದುಕೊಂಡಿದೆ.