ಕಟೀಲು,ಕಿನ್ನಿಗೋಳಿ,ತೋಕೂರು,ಪಟ್ಟೆಯಲ್ಲಿ ವರಮಹಾಲಕ್ಷ್ಮೀ ಪೂಜೆ ಸಂಭ್ರಮ
Friday, August 8, 2025
ಕಟೀಲು: ಕಟೀಲು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ವತಿಯಿಂದ ಸಂಘದ ಸಭಾಭವನದಲ್ಲಿ ವರಮಹಾಲಕ್ಷೀ ವೃತವನ್ನು ಆಚರಿಸಲಾಯಿತು.
ಕಟೀಲು : ನಂದಿನಿ ಮಹಿಳಾ ಮಂಡಲ ಕೊಡೆತ್ತೂರು ಮಲ್ಲಿಗೆಯಂಗಡಿ ಇದರ ಅಶ್ರಯದಲ್ಲಿ ಮಲ್ಲಿಗೆಯಂಗಡಿ ನಂದಿನಿಕಟ್ಟೆಯಲ್ಲಿ ಶುಕ್ರವಾರ ಸಾಮೂಹಿಕ ವರಮಹಾಲಕ್ಷಿ ಪೂಜೆ ನಡೆಯಿತು.
ಕಿನ್ನಿಗೋಳಿ: ಶ್ರೀ ಅರಸುಕುಂಜಿರಾಯ ದೈವಸ್ಥಾನ ಅತ್ತೂರು ಕೆಮ್ರಾಲ್ ಕಿಲೆಂಜೂರು ಇಲ್ಲಿನ ಅಖಿಲಾಂಡೇಶ್ವರೀ ಸನ್ನಿದಿಯಲ್ಲಿ ಶುಕ್ರವಾರ 16 ನೇ ವರ್ಷದ ವರಮಹಾಲಕ್ಷೀ ಪೂಜೆ ನಡೆಯಿತು.ಬೆಳಿಗ್ಗೆ ಗ್ರಾಮಸ್ಥರಿಂದ ಅಖಿಲಾಂಡೇಶ್ವರಿ ದೇವಿಗೆ ಸೀಯಾಳಭಿಷೇಕ, 10.30 ಕ್ಕೆ ಸಾಮೂಹಿಕ ವರಮಹಾಲಕ್ಷೀ ಪೂಜೆ, ಮದ್ಯಾಹ್ನ 1.00 ಗಂಟೆಗೆ ಮಹಾಪೂಜೆ ನಂತರ ಅನ್ನಸಂತರ್ಪಣೆ, ಸಂಜೆ 5.00 ಗಂಟೆಗೆ ದುರ್ಗಾನಮಸ್ಕಾರ ಪೂಜೆ, 6.00 ಗಂಟೆಗೆ ಭಜನಾಮಂಗಲೋತ್ಸವ ನಂತರ ಮಹಾಪೂಜೆ ಹಾಗೂ ಅನ್ನಸಂತರ್ಪಣೆ ನಡೆಯಿತು.
ತೋಕೂರು:ಕುಲಾಲ ಸಮಾಜ ಸೇವಾ ಸಂಘ (ರಿ) ಕುಲಾಲ ಮಹಿಳಾ ವಿಭಾಗ ತೋಕೂರು ಇದರ ವತಿಯಿಂದ ತೋಕೂರು ಕುಲಾಲ ಭವನದಲ್ಲಿ ವರಮಹಾಲಕ್ಷೀ ಪೂಜೆಯನ್ನು ಆಚರಿಸಲಾಯಿತು.
ಕಿನ್ನಿಗೋಳಿ:ಕಾಳಿಕಾಂಬಾ ಮಹಿಳಾ ವೃಂದ ಕಿನ್ನಿಗೋಳಿ ಇವರ ವತಿಯಿಂದ ಸರಪ್ ಅಣ್ಣಯ್ಯಾಚಾರ್ ಸಭಾಭವನ ರಾಜರತ್ನಾಪುರದಲ್ಲಿ ವರಮಹಾಲಕ್ಷೀ ಪೂಜೆಯನ್ನು ಆಚರಿಸಲಾಯಿತು.
ಕಿನ್ನಿಗೋಳಿ: ಆದರ್ಶ ಮಹಿಳಾ ಮಂಡಳಿ ಪಟ್ಟೆ ಇವರ ವತಿಯಿಂದ 21 ನೇ ವರ್ಷದ ಸಾರ್ವಜನಿಕ ಶ್ರೀ ವರಮಹಾಲಕ್ಷೀ ಪೂಜೆ ಪಟ್ಟೆ ಜಾರಂದಾಯ ದೈವಸ್ಥಾನದ ರಾಜಗೋಪುರದಲ್ಲಿ ನಡೆಯಿತು.