ಎಕ್ಕಾರು:16ನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ವ್ರತ ಪೂಜೆ
Friday, August 8, 2025
ಬಜಪೆ:ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ.ಟ್ರಸ್ಟ್ ಬಜ್ಪೆ ತಾಲೂಕು ಕಿನ್ನಿಗೋಳಿ ವಲಯದ ತೆಂಕ ಮತ್ತು ಬಡಗ ಎಕ್ಕಾರು ಒಕ್ಕೂಟ ಹಾಗೂ ಊರ ಹತ್ತು ಸಮಸ್ತರ ಸಂಯುಕ್ತ ಆಶ್ರಯದಲ್ಲಿ ಪರಮಪೂಜ್ಯ ಡಾ. ಡಿ.ವೀರೇಂದ್ರ ಹೆಗ್ಗಡೆ ಮತ್ತು ಹೇಮಾವತಿ ಹೆಗ್ಗಡೆ ಅವರ ಮಾರ್ಗದರ್ಶನದೊಂದಿಗೆ ಎಕ್ಕಾರಿನ ಶ್ರೀ ಕುಂಭ ಕಂಠಿಣಿ ಸಭಾಭವನದಲ್ಲಿ 16ನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ವ್ರತ ಪೂಜೆಯು ಎಕ್ಕಾರು ಶ್ರೀಕೃಷ್ಣ ಮಠದ ವೇದಮೂರ್ತಿ ಹರಿದಾಸ ಉಡುಪರವರ ಪೌರೋಹಿತ್ಯದಲ್ಲಿ ನಡೆಯಿತು.
ಈ ಸಂದರ್ಭ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶ್ರೀಕೃಷ್ಣಮಠದ ವೇದಮೂರ್ತಿ ಹರಿದಾಸ ಉಡುಪ ಅವರು ಧಾರ್ಮಿಕ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಪೂಜಾ ಸಮಿತಿಯ ಅಧ್ಯಕ್ಷೆ ಶ್ರೀಮತಿ ಪ್ರೇಮ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಗಿರೀಶ್ ಎಂ ,ಎಕ್ಕಾರು ಗ್ರಾ.ಪಂ ನ ಮಾಜಿ ಅಧ್ಯಕ್ಷ ಸುದೀಪ ಅಮೀನ್, ಪಂಚಾಯತ್ ಸದಸ್ಯೆ ಸುರೇಖಾ ಶೆಟ್ಟಿ, ಒಕ್ಕೂಟದ ಅಧ್ಯಕ್ಷರುಗಳಾದ ಶ್ರೀಮತಿ ವಿಮಲಾ, ಶ್ರೀಮತಿ ರಾಜೀವಿ, ಮಾಜಿ ಪದಾಧಿಕಾರಿಗಳಾದ ಗಂಗಾಧರ್ ಪೂಜಾರಿ , ಶ್ಯಾಮ್ ಶೆಟ್ಟಿ, ವೆಂಕಪ್ಪ ಗೌಡ ,ಸೇವಾ ಪ್ರತಿನಿಧಿಗಳಾದ ದಿವಾಕರ್, ಕಮಲ ,ನಾಗೇಶ, ನೋಡಲ್ ಅಧಿಕಾರಿ ಧನಂಜಯ,
ಪೂಜಾ ಸಮಿತಿಯ ಪದಾಧಿಕಾರಿಗಳು,
ಪ್ರಗತಿ ಬಂದು ಸ್ವಸಹಾಯ ಸಂಘದ ಎಲ್ಲಾ ಸದಸ್ಯರುಗಳು ಉಪಸ್ಥಿತರಿದ್ದರು.ವಿಎಲ್ ಇ
ಪ್ರಜ್ಞ ಸ್ವಾಗತಿಸಿದರು.ವಲಯದ ಮೇಲ್ವಿಚಾರಕಿ ಶ್ರೀಮತಿ ಶಾಂತಿ ಕಾರ್ಯಕ್ರಮ ನಿರೂಪಿಸಿದರು.