-->
ಎಸ್ಐಟಿ ತನಿಖೆಯ ಸಂದರ್ಭದಲ್ಲಿ ಎಡಪಂಥೀಯರು, ಹಿಂದೂಯೆತರರಿಂದ ಧರ್ಮದ ವಿರುದ್ಧವೇ ಅಪನಂಬಿಕೆ ಸೃಷ್ಟಿ:ಡಾ. ಭರತ್ ಶೆಟ್ಟಿ ಕಿಡಿ

ಎಸ್ಐಟಿ ತನಿಖೆಯ ಸಂದರ್ಭದಲ್ಲಿ ಎಡಪಂಥೀಯರು, ಹಿಂದೂಯೆತರರಿಂದ ಧರ್ಮದ ವಿರುದ್ಧವೇ ಅಪನಂಬಿಕೆ ಸೃಷ್ಟಿ:ಡಾ. ಭರತ್ ಶೆಟ್ಟಿ ಕಿಡಿ

ಮಂಗಳೂರು:  ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಧರ್ಮಸ್ಥಳ ಗ್ರಾಮದಲ್ಲಿ  ಅತ್ಯಾಚಾರ, ಕೊಲೆ ಪ್ರಕರಣ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಪಟ್ಟಂತೆ ಎಸ್ಐಟಿ ತನಿಖೆ ನಡೆಸುತ್ತಿದ್ದು, ಈ ನಡುವೆ ಎಡಪಂತಿಯರು, ಹಿಂದೂಯೇ ತರ ವ್ಯಕ್ತಿಗಳು ಹಿಂದೂ ಧರ್ಮದ ಆಚಾರ ವಿಚಾರಗಳಲ್ಲಿ ಅಪ ನಂಬಿಕೆಯನ್ನು ಸೃಷ್ಟಿಸುವಂತೆ ಲಂಗು ಲಗಾಮು ಇಲ್ಲದೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಗಳನ್ನು ಹಾಕುತ್ತಿರುವು ದಕ್ಕೆ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಭರತ್ ಶೆಟ್ಟಿ ತೀವ್ರ ಅಕ್ರೋಶ ಹೊರ ಹಾಕಿದ್ದಾರೆ.

 ಕೆಲವೊಂದು ಎನ್‌ಜಿಒ ಸಂಘಟನೆಗಳು, ಹಿಂದೂಯೇತರ ವ್ಯಕ್ತಿಗಳು, ಎಡಪಂಥೀಯರು ತನಿಖೆಗೂ  ಮುನ್ನವೇ,  ಅಪರಾಧ ಪ್ರಕರಣಗಳನ್ನು ತಾವೇ ಕಂಡುಕೊಂಡಂತೆ
ತಮ್ಮ ಸಾಮಾಜಿಕ ಜಾಲತಾಣದಲ್ಲಿ ತಾವೇ ತನಿಖೆ ಮಾಡಿ ವರದಿ  ಒಪ್ಪಿಸಿದ ಹಾಗೆ, ಪೋಸ್ಟ್ಗಳನ್ನು  ಹಾಕುತ್ತಿದ್ದಾರೆ. ಸಮಯ ಸಾಧಕತನ ತೋರಿಸಿ, ಧರ್ಮ, ಧರ್ಮಸ್ಥಳ ಶ್ರೀ ಮಂಜುನಾಥನ ಮೇಲೆ ಮೇಲೆ ಆರೋಪ  ಹೊರಿಸಲು, ತಾಮುಂದು ತಾಮುಂದು ಎಂದು ಪೋಸ್ಟ್ ಹಾಕುತ್ತಿದ್ದಾರೆ.

 ಅಪರಾಧ ಪ್ರಕರಣದಲ್ಲಿ ಹಿಂದೂ ಧರ್ಮವನ್ನು ಹಿಂದು ಆಚಾರ ವಿಚಾರಗಳನ್ನು,  ಧರ್ಮಸ್ಥಳ ಮಂಜುನಾಥ ಕ್ಷೇತ್ರ ದೇವಾಲಯವನ್ನು ಎಳೆದು ತಂದು ಹಿಂದೂ ಸಮಾಜದ ಜನರ ಮನಸ್ಸಿಗೆ ಘಾಸಿಯನ್ನ ಉಂಟು ಮಾಡುವ ಮೂಲಕ ವಿಕೃತ ಆನಂದವನ್ನು ಕಾಣುತ್ತಿದ್ದಾರೆ.
 ಅಪರಾಧ ಪ್ರಕರಣಗಳಲ್ಲಿ ಭಾಗಿಯಾದವರ ಪತ್ತೆಗೆ ಎಸ್ ಐ ಟಿ ತನಿಖೆ ನಡೆಸುತ್ತಿದೆ.ಈ ನಡುವೆ ಹಿಂದೂ ಧರ್ಮ ಆಚಾರ ವಿಚಾರಗಳನ್ನು ಅವಹೇಳನ ಮಾಡಿ ನಿಕೃಷ್ಟವಾಗಿ ಕಾಣುವುದನ್ನು ಖoಡಿಸುವುದಾಗಿ ಎಂದು ಡಾ. ಭರತ್ ಶೆಟ್ಟಿ ಹೇಳಿದ್ದಾರೆ.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ