ಕಿನ್ನಿಗೋಳಿಯಲ್ಲಿ ನಾಯಿಗಳಿಗೆ ಉಚಿತ ಸಂತಾನಹರಣ ಚಿಕಿತ್ಸೆ
Friday, August 29, 2025
ಕಿನ್ನಿಗೋಳಿ : ದೇಸಿ ಮನೆ ನಾಯಿಗಳಿಗೆ ಉಚಿತವಾಗಿ ಸಂತಾನಹರಣ ಚಿಕಿತ್ಸೆ ಕಿನ್ನಿಗೋಳಿಯ ಪಶುವೈದ್ಯ ಕೇಂದ್ರದ ಬಳಿ ಸಪ್ಟಂಬರ್ ೩ರಿಂದ ತಾ. ೭ರತನಕ ನಡೆಯಲಿದೆ ಎಂದು ಸಂಘಟಕ ಜಯಕುಮಾರ ಮಯ್ಯ ತಿಳಿಸಿದ್ದಾರೆ. ಮಧ್ವರಾಜ್ ಅನಿಮಲ್ ಕೇರ್ ಟ್ರಸ್ಟ್, ವಲ್ಡ್‌ವೈಡ್ ವೆಟರ್‌ನರಿ ಸರ್ವಿಸ್, ಎನಿಮಲ್ ಕೇರ್ ಟ್ರಸ್ಟ್ ಶಕ್ತಿನಗರ ಮತ್ತಿತರ ಸಂಘಟನೆಗಳ ಆಶ್ರಯದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ನೂರಕ್ಕೂ ಹೆಚ್ಚು ನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ನೀಡಲಾಗುವುದು. ವಿವರಗಳಿಗೆ ಮಮತಾ ರಾವ್(೯೯೦೨೨೫೩೦೬೪) ಸಂಪರ್ಕಿಸಬಹುದಾಗಿದೆ.