ಖೇಲೋ ಇಂಡಿಯಾ ಸ್ಪರ್ಧೆಗೆ ಆಯ್ಕೆ
Friday, August 29, 2025
ಕಟೀಲು: ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮ ದರ್ಜೆ ಕಾಲೇಜಿನ ತೃತೀಯ ಬಿ.ಕಾಂ. ವಿದ್ಯಾರ್ಥಿನಿ ಕು. ಶ್ರೇಯ ಹಾಗೂ ದ್ವಿತೀಯ ಬಿ.ಕಾಂ. ವಿದ್ಯಾರ್ಥಿನಿ ಕು. ಪ್ರೀತಿ ಇವರು ಆಗಸ್ಟ್ ೨೨ ರಿಂದ ೨೪ ರವರೆಗೆ ಚಿತ್ರದುರ್ಗದಲ್ಲಿ ನಡೆದ ರಾಜ್ಯ ಮಟ್ಟದ ಯೋಗ ಸ್ಪರ್ಧೆಯಲ್ಲಿ ಸಾಧನೆಗೈದು ಖೇಲೋ ಇಂಡಿಯಾ ಸ್ಪರ್ಧೆಗೆ ಆಯ್ಕೆಯಾದರು.
ಕು. ಶ್ರೇಯಾ ರಾಜ್ಯ ಮಟ್ಟದ ಸಾಂಪ್ರದಾಯಿಕ ಯೋಗಾಸನದಲ್ಲಿ ೨ ನೇ ಸ್ಥಾನ, ಬೆನ್ನು ಬಾಗಿಸುವಿಕೆಯಲ್ಲಿ ೨ ನೇ ಸ್ಥಾನ ಮತ್ತು ಲೆಗ್ ಬ್ಯಾಲೆನ್ಸ್‌ನಲ್ಲಿ ೧ ನೇ ಸ್ಥಾನ ಹಾಗೂ ಕು. ಪ್ರೀತಿ ಸುಪೈನ್ ವೈಯಕ್ತಿಕ ವಿಭಾಗದಲ್ಲಿ ೨ ನೇ ಸ್ಥಾನ ಪಡೆದಿರುತ್ತಾರೆ. ಕು. ಪ್ರೀತಿ ಮತ್ತು ಕು. ಶ್ರೇಯಾ ಇಬ್ಬರೂ ಆರ್ಟಿಸ್ಟಿಕ್ ವಿಭಾಗದಲ್ಲಿ ಎರಡನೇ ಸ್ಥಾನ ಪಡೆದರು. ಕು. ಶ್ರೇಯಾ ಖೇಲೋ ಇಂಡಿಯಾ ಸ್ಪರ್ಧೆಗೆ ಆಯ್ಕೆಯಾದರು.
ಈರ್ವರು ವಿದ್ಯಾರ್ಥಿನಿಯರು ಯೋಗ ಗುರು ಹರಿರಾಜ್ ಶೆಟ್ಟಿಗಾರ್ ಇವರಿಂದ ತರಬೇತಿಯನ್ನು ಪಡೆದು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಅಶ್ವತ್ಥ್ ಇವರ ಮಾರ್ಗದರ್ಶನದಂತೆ ಈ ಸ್ಪರ್ಧೆಯಲ್ಲಿ ಭಾಗವಹಿಸಿರುತ್ತಾರೆ.