-->

ಸಮಸ್ತ ಜನತೆಗೆ ಗಣೇಶ ಚತುರ್ಥಿಯ ಶುಭಾಶಯಗಳು 🙏

ಸಮಸ್ತ ಜನತೆಗೆ ಗಣೇಶ ಚತುರ್ಥಿಯ ಶುಭಾಶಯಗಳು  🙏
ಸಮಸ್ತ ಜನತೆಗೆ ಗಣೇಶ ಚತುರ್ಥಿಯ ಶುಭಾಶಯಗಳು 🙏
ಕಟೀಲುಶ್ರೀಗೋಪಾಲಕೃಷ್ಣ  ಆಸ್ರಣ್ಣ ಸಂಸ್ಮರಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ

ಕಟೀಲುಶ್ರೀಗೋಪಾಲಕೃಷ್ಣ ಆಸ್ರಣ್ಣ ಸಂಸ್ಮರಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ

ಕಟೀಲು:ಶ್ರೀಗೋಪಾಲಕೃಷ್ಣ  ಆಸ್ರಣ್ಣ ಸಂಸ್ಮರಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವು ಕಟೀಲಿನ ಶ್ರೀ ಗೋಪಾಲಕೃಷ್ಣ ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ದಿ.ಗೋಪಾಲಕೃಷ್ಣ ಆಸ್ರಣ್ಣ ಅರ್ಚಕ ಪ್ರಶಸ್ತಿಯನ್ನು ಉಡುಪಿಯ ಶ್ರೀ ಅನಂತೇಶ್ವರ ದೇವಸ್ಥಾನದ ಅರ್ಚಕ ವೇ.ಮೂ.ಸಗ್ರಿ ವೇದವ್ಯಾಸ ಐತಾಳ ಹಾಗೂ ಪತ್ನಿ ಲಲಿತಾರಿಗೆ ,ಮೊಕ್ತೇಸರ ಪ್ರಶಸ್ತಿಯನ್ನು  ಪುತ್ತಿಗೆ ಮಹತೋಭಾರ  ಶ್ರೀ ಸೋಮನಾಥ ದೇವಸ್ಥಾನದ ಅನುವಂಶಿಕ ಮೊಕ್ತೇಸರ ಕುಲದೀಪ ಎಂ.ಚೌಟರಿಗೆ,ಆಸ್ರಣ್ಣ ಅಭಿಮಾನಿ ಬಳಗ ಕದ್ರಿ ಇವರು ನೀಡುವ ದಿ.ಗೋಪಾಲಕೃಷ್ಣ ಆಸ್ರಣ್ಣ ಕಲಾವಿದ ಪ್ರಶಸ್ತಿಯನ್ನು ಕಟೀಲು ಮೇಳದ ಕಲಾವಿದ ವಾಟೆಪಡ್ಪು ವಿಷ್ಣುಶರ್ಮ,ಪತ್ನಿ ರೇಖಾ  ಕೆ.ಅವರಿಗೆ ನೀಡಲಾಯಿತು.

ಜಾಗತಿಕ  ಬಂಟರ ಸಂಘದ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ,ಕಟೀಲಿನ ಕೃಷಿಕ ಜಾನ್ ಡೆನ್ನಿಸ್  ಡಿ ಸೋಜಾ , ಬಪ್ಪನಾಡುಗುತ್ತು ಸಾಂತ್ಯ ಹರೀಶ್ ಶೆಟ್ಟಿ ಕೊಡೆತ್ತೂರು
ಹಾಗೂ ಕಟೀಲು ಶಿಕ್ಷಣ ಸಂಸ್ಥೆಗಳ ಪ್ರತಿಭಾವಂತ ವಿದ್ಯಾರ್ಥಿಗಳನ್ನು ವೇದಿಕೆಯಲ್ಲಿ ಗೌರವಿಸಲಾಯಿತು.

ಈ ಸಂದರ್ಭ ಮಂಗಳೂರು ವಿವಿಯ ಕುಲಪತಿ ಪ್ರೊ.ಪಿ.ಎಲ್ ಧರ್ಮ,ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ,ಮಾಜಿ ಸಚಿವ ನಾಗರಾಜ ಶೆಟ್ಟಿ,ಧರ್ಮದರ್ಶಿ ಡಾ.ಹರಿಕೃಷ್ಣ ಪುನರೂರು,ಕಟೀಲು ದುರ್ಗಾ ಸಂಜೀವನಿ ಅಸ್ಪತ್ರೆಯ ವೈದ್ಯ ಡಾ.ಶಿವಾನಂದ ಪ್ರಭು,ನಂದಿನಿ ಬ್ರಾಹ್ಮಣ ಸಭಾದ ಡಾ.ಪದ್ಮನಾಭ ಭಟ್ ,ಮಂಗಳೂರು ಜೈನ್ ಮಿಲನ್  ಅಧ್ಯಕ್ಷ ರತ್ನಾಕರ ಜೈನ್,ಕಲ್ಕೂರ ಪ್ರತಿಷ್ಠಾನದ ಪ್ರದೀಪ್ ಕುಮಾರ್ ಕಲ್ಕೂರ,ಮೂಡಬಿದ್ರೆಯ ಉದ್ಯಮಿ ಶ್ರೀಪತಿಭಟ್,ಕಿನ್ನಿಗೋಳಿ ಯುಗಪುರುಷದ ಪ್ರಧಾನ ಸಂಪಾದಕ ಕೆ.ಭುವನಾಭಿರಾಮ ಉಡುಪ,ಶಾರದಾ  ಶಿಕ್ಷಣ ಸಮೂಹ ಸಂಸ್ಥೆಯ ಡಾ.ಎಂ.ಬಿ ಪುರಾಣಿಕ್ ,ಯಕ್ಷಧ್ರುವ ಪಟ್ಲ ಫೌಂಡೇಶನ್ ನ ಸಂಸ್ಥಾಪಕ ಪಟ್ಲ ಸತೀಶ್ ಶೆಟ್ಟಿ,ಸುಧಾಕರ ರಾವ್,ಸಂಜಯ್ ಕುಮಾರ್,ಗಣೇಶ್ ಶೆಟ್ಟಿ,ಆರವಿಂದ ಶೇಟ್,ಡಾ.ನಯನಾಭಿರಾಮ ಉಡುಪ,ಡಾ.ಪದ್ಮನಾಭ ಉಡುಪ,ಲೀಲಾಕ್ಷ ಕರ್ಕೇರಾ,ಜಯಂತಿ ಆಸ್ರಣ್ಣ,ಗೋಪಾಲಕೃಷ್ಣ ಆಸ್ರಣ್ಣ,ಅಶ್ವಥ್ ರಾವ್  ಹಾಗೂ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸಂಘಟಕ ,ಟ್ರಸ್ಟ್ ನ ಅಧ್ಯಕ್ಷ ಕೆ.ಲಕ್ಷ್ಮೀನಾರಾಯಣ ಆಸ್ರಣ್ಣ ಸ್ವಾಗತಿಸಿದರು.ಡಾ.ರಮ್ಯಾ ಆಸ್ರಣ್ಣ ಕಾರ್ಯಕ್ರಮ ನಿರೂಪಿಸಿದರು.ಗುರುಪ್ರಸಾದ್ ಭಟ್ ವಂದಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಜಿಲ್ಲೆಯ ಪ್ರಸಿದ್ದ ಕಲಾವಿದರಿಂದ  ಪಾರಿಜಾತ,ನರಕಾಸುರ ವಧೆ ಯಕ್ಷಗಾನ ಬಯಲಾಟವು ನಡೆಯಿತು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ