ಕೊಂಕಣಿ ಮಾನ್ಯತ ದಿವಸ ಕಾರ್ಯಕ್ರಮಕ್ಕೆ ಚಾಲನೆ
Sunday, August 24, 2025
ಕಿನ್ನಿಗೋಳಿ: ಕೊಂಕಣಿಯನ್ನು ಉಳಿಸಿ ಬೆಳೆಸಿ ಮುಂದಿನ ಪೀಳಿಗೆಗೆ ಓದಲು ಹಾಗೂ ಬರೆಯಲು ಕಲಿಸಿ ಎಂದು ಎಸ್ ವಿ ಡಿ. ಅರ್ನೋಲ್ಡ್ ಆಶ್ರಮದ ನಿರ್ದೇಶಕ ವಂದನೀಯ ಧರ್ಮ ಗುರುಗಳಾದ ಫಾ. ಮೇಲ್ವಿನ್ ಸಿಕ್ವೇರಾ ಹೇಳಿದರು.
ಅವರು ದಾಮಸ್ಕಟ್ಟೆ ರೆಮೆದಿ ಅಮ್ಮನವರ ದೇವಾಲಯದಲ್ಲಿ ಕೊಂಕಣಿ ಮಾನ್ಯತ ದಿವಸದ ಆಚರಣೆಯ ಅಂಗವಾಗಿ ಕೊಂಕಣಿ ಬಾವುಟ ಹಾರಿಸಿ ಮಾತನಾಡಿದರು.
ಈ ಸಂದರ್ಭ ದಾಮಸ್ ಕಟ್ಟೆ ರೆಮೇದಿ ಅಮ್ಮನವರ ದೇವಾಲಯದ ಪ್ರಧಾನ ಧರ್ಮ ಗುರುಗಳಾದ ಫಾ. ಓಸ್ವಾಲ್ಡ್ ಮೊಂತೋರೊ, ಪಾಲನ ಮಂಡಳಿಯ ಉಪಾಧ್ಯಕ್ಷ ರೋಹನ್ ಡಿಕೋಸ್ಟ, ಕಾರ್ಯದರ್ಶಿ ಜೇಮ್ಸ್ ಲೋಬೋ, 21 ಆಯೋಗದ ಸಂಯೋಜಕ ವಿಲ್ಫ್ರೆಡ್ ಮೋನಿಸ್, ಸ್ತ್ರೀ ಸಂಘಟನೆ ಅಧ್ಯಕ್ಷೆ ಅನಿತಾ ಡಿಸೋಜ, ಕೆಥೋಲಿಕ್ ಸಭಾ ಕಾರ್ಯದರ್ಶಿ ಲವೀನಾ ಪಿರೇರಾ,ಕಥೋಲಿಕ್ ಸಭಾ ನಿಕಟಪೂರ್ವ ಅಧ್ಯಕ್ಷ ಎವ್ಜಿನ್ ಸಲ್ಡಾನ್ಹಾ , ಅಂತರ್ಧರ್ಮಿಯ ಆಯೋಗದ ಸಂಯೋಜಕ ಪೌಲ್ ಮಿರಾಂದ ಹಾಗೂ ಮತ್ತಿತರರು ಉಪಸ್ಥಿತರಿದ್ದರು.