ಬಾಲಕಿಗೆ ಕಚ್ಚಿ ಗಾಯಗೊಳಿಸಿದ ಕೋತಿ ಸೆರೆ
Monday, July 14, 2025
ಕೈಕಂಬ:ತೆಂಕ ಎಡಪದವು ಗ್ರಾಮದ ಕುಂದೋಡಿ ದೈವಸ್ಥಾನದ ಸಮೀಪದ ಮನೆಗಳಿಗೆ ನುಗ್ಗಿದ ಕೋತಿಯೊಂದು ಬಾಲಕಿಗೆ ಗಾಯಗೊಳಿಸಿದ್ದು, ಕೋತಿಯನ್ನು ಭಾನುವಾರದಂದು ಅರಣ್ಯ ಇಲಾಖಾಧಿಕಾರಿಗಳು ಕೊನೆಗೂ ಸೆರೆ ಹಿಡಿದಿದ್ದಾರೆ.ಗಾಯಗೊಂಡ ಬಾಲಕಿಗೆ ಚಿಕಿತ್ಸೆ ನೀಡಲಾಗಿದ್ದು,ಬಾಲಕಿ ಆಪಾಯದಿಂದ ಪಾರಾಗಿದ್ದಾಳೆ.ಕಳೆದ ಕೆಲವು ದಿನಗಳಿಂದ ಕುಂದೋಡಿ ಪರಿಸರದಲ್ಲಿ ಸುತ್ತಾಡುತ್ತಿದ್ದ ಕೋತಿ ಶನಿವಾರದಂದು ಮನೆಯೊಂದಕ್ಕೆ ನುಗ್ಗಿ ಮಲಗಿದ್ದ ಬಾಲಕಿಗೆ ಕಚ್ಚಿ ಗಾಯಗೊಳಿಸಿದೆ.ಈ ಬಗ್ಗೆ ಎಡಪದವು ಗ್ರಾ.ಪಂ ಹಾಗೂ ಸ್ಥಳೀಯರು ಅರಣ್ಯ ಇಲಾಖೆಗೆ ದೂರು ನೀಡಿದ್ದರು.ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ ಕೊನೆಗೂ ಕೋತಿಯನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.