-->
ಮಕ್ಕಳಲ್ಲಿ ಇಚ್ಚಾಶಕ್ತಿಯ ಬದ್ಧತೆಯಿರಲಿ : ಮುನಿರಾಜ್ ಜೈನ್

ಮಕ್ಕಳಲ್ಲಿ ಇಚ್ಚಾಶಕ್ತಿಯ ಬದ್ಧತೆಯಿರಲಿ : ಮುನಿರಾಜ್ ಜೈನ್

ಮೂಲ್ಕಿ:  ಮಕ್ಕಳು ಇಚ್ಛಾಶಕ್ತಿ ಬದ್ಧತೆ ಹಾಗೂ ಛಲವನ್ನು ಬೆಳೆಸಿಕೊಳ್ಳಬೇಕು. ಮಗುವಿನಲ್ಲಿ ಹುದುಗಿರುವ ಪ್ರತಿಭಾ ಸಾಮರ್ಥ್ಯವನ್ನು ಬೆಳೆಸುವಂತಹ ವಾತಾವರಣ ಶಿಕ್ಷಣ ಸಂಸ್ಥೆಯಲ್ಲಿ ನಿರ್ಮಾಣ ಮಾಡಬೇಕು, ಹೆತ್ತವರು ತಮ್ಮ ಸ್ವಾರ್ಥಕ್ಕೆ ಅಂಟಿಕೊಂಡು ಮಕ್ಕಳ ಮೇಲೆ ಒತ್ತಡ ಹೇರಬಾರದು ಎಂದು ನಿವೃತ್ತ ಮುಖ್ಯ ಶಿಕ್ಷಕ ಮುನಿರಾಜ್ ಜೈನ್ ರೆಂಜಾಳ ಹೇಳಿದರು. 
ಅವರು ಮೂಲ್ಕಿ ಕಿಲ್ಪಾಡಿ ಮೆಡಲಿನ್ ಪದವಿಪೂರ್ವ ಕಾಲೇಜಿನಲ್ಲಿ ನಡೆದ ರಕ್ಷಕ ಶಿಕ್ಷಕ ಸಂಘದ ಮಹಾಸಭೆಯಲ್ಲಿ ಸಂಸ್ಕಾರಯುತ ಭವಿಷ್ಯ ರೂಪಿಸುವಲ್ಲಿ ಪೋಷಕರ ಪಾತ್ರ ಹಾಗೂ ಸವಾಲು ಎಂಬ ವಿಷಯದ ಬಗ್ಗೆ ಮಾತನಾಡಿದರು. 
ಕಾಲೇಜಿನ ಸಂಚಾಲಕಿ ಭಗಿನಿ ಮಾರಿಯೊಲಾ ಮಾತನಾಡಿ, ಮಕ್ಕಳಲ್ಲಿ ಸಕಾರಾತ್ಮಕ ಚಿಂತನೆಗಳನ್ನು ಜಾಗೃತಿಗೊಳಿಸಿ ಸಹಕಾರ ಮನೋಭಾವವನ್ನು ಮಕ್ಕಳಲ್ಲಿ ಬೆಳೆಸಿ ಹೃದಯವಂತರನ್ನಾಗಿ ಮಾಡುವುದು ಪ್ರತಿ ಹೆತ್ತವರ ಕರ್ತವ್ಯ ಎಂದರು. 
ಕಾಲೇಜಿನ ಪ್ರಾಂಶುಪಾಲೆ ಭಗಿನಿ ಲೀಡಿಯಾಶಾಂತಿ ಮೆಂಡೋನ್ಸ ಅಧ್ಯಕ್ಷತೆಯನ್ನು ವಹಿಸಿದ್ದರು. 
ಕಾಲೇಜಿನ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷೆ ಶಾಂತಿ ಫೆರ್ನಾಂಡಿಸ್, ಸಂಘದ ರೋಶ್ನಿ, ಕೋಶಾಧಿಕಾರಿ ಅನುಷಾ ಮತ್ತಿತರರು ಉಪಸ್ಥಿತರಿದ್ದರು.
 ಉಪನ್ಯಾಸಕ ವಿಶಾಂತ್ ಶೆಟ್ಟಿ ಸ್ವಾಗತಿಸಿದರು.  ರಮ್ಯಾ ವಂದಿಸಿದರು.
ಈ ಸಂದರ್ಭದಲ್ಲಿ ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆಯಲ್ಲಿ ವಿಷಯವಾರು ನೂರು ಶೇಕಡ ಫಲಿತಾಂಶಗಳಿಸಿದ ಉಪನ್ಯಾಸಕರನ್ನು ಕಾಲೇಜು ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಲಾಯಿತು. 
ವಾಣಿಶ್ರೀ ಕಾರ್ಯಕ್ರಮ ನಿರೂಪಿಸಿದರು.


ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ