ಪುನರೂರು ಶ್ರೀ ವಿಶ್ವನಾಥ ದೇವಸ್ಥಾನದಲ್ಲಿ ಗರ್ಭನ್ಯಾಸ ಮತ್ತು ಷಡಾಧಾರ ಪ್ರತಿಷ್ಠೆ
Tuesday, July 15, 2025
ಮುಲ್ಕಿ:ಮೂಲ್ಕಿ ಸೀಮೆಯ ಒಂಬತ್ತು ಮಾಗಣೆಯ ಪುನರೂರು ಶ್ರೀ ವಿಶ್ವನಾಥ ದೇವಸ್ಥಾನದ ಸಮಗ್ರ ಜೀರ್ಣೋದ್ಧಾರದ ಅಂಗವಾಗಿ ಶ್ರೀ ದೇವರಿಗೆ ಇಷ್ಟಕಾನ್ಯಾಸ ಪೂರ್ವಕ ಗರ್ಭನ್ಯಾಸ ಮತ್ತು ಷಡಾಧಾರ ಪ್ರತಿಷ್ಠೆಯನ್ನು ಸುಬ್ರಮಣ್ಯ ಮಠಾಧೀಶರಾದ ಶ್ರೀ ವಿದ್ಯಾ ಪ್ರಸನ್ನ ತೀರ್ಥ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ವೇದಮೂರ್ತಿ ಕಳತ್ತೂರು ಕರುಣಾಕರ ತಂತ್ರಿಯವರ ನೇತೃತ್ವದಲ್ಲಿ ಸೋಮವಾರ ಬೆಳಿಗ್ಗೆ ನಡೆಯಿತು
ಬಳಿಕ ದೇವಸ್ಥಾನದ ಸಭಾಭವನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಸುಬ್ರಮಣ್ಯ ಮಠಾಧೀಶರಾದ ಶ್ರೀ ವಿದ್ಯಾ ಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ
ಐತಿಹಾಸಿಕ ಹಿನ್ನೆಲೆಯ ದೇವಾಲಯವು ಪರಿಪೂರ್ಣ ಸ್ವರೂಪದೊಂದಿಗೆ ಪುನರ್ ನಿರ್ಮಾಣ ಗೊಂಡು ಸನ್ನಿಧಾನದ ಸಮೃದ್ಧಿಯಿಂದ ಎಲ್ಲರಿಗೂ ಫಲ ಪ್ರಾಪ್ತಿಯಾಗಲಿ ಎಂದರು
ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ ಸರ್ವ ಭಕ್ತರ ಸಹಕಾರದಿಂದ ಜೀರ್ಣೋದ್ಧಾರ ಗೊಳ್ಳುವ ದೇವಳದ ಅಭಿವೃದ್ಧಿಗೆ ಇಲಾಖಾ ಅನುದಾನ ದೊರಕಿಸಿಕೊಡಲು ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ಹೇಳಿದರು
ಈ ಸಂದರ್ಭ ಕಟೀಲು ಕ್ಷೇತ್ರದ ಅರ್ಚಕ ವೇ.ಮೂ.
ಲಕ್ಷ್ಮೀನಾರಾಯಣ ಆಸ್ರಣ್ಣ , ವಾದಿರಾಜ ಉಪಾಧ್ಯಾಯ ಕೊಲಕಾಡಿ,ಕ್ಷೇತ್ರದ ಅರ್ಚಕ ಶಶಾಂಕ್ ಮುಚ್ಚಿಂತಾಯ, ವಾಸ್ತು ತಜ್ಞ ಗುಂಡಿಬೈಲು ಸುಬ್ರಹ್ಮಣ್ಯ ಭಟ್,ಅಚ್ಯುತ್ ಭಟ್ ಪಾವಂಜೆ,ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು, ವಿಷ್ಣು ಮೂರ್ತಿ ಆಚಾರ್ಯ, ಲಕ್ಷ್ಮೀನಾರಾಯಣ ಮುಚ್ಚಿಂತಾಯ, ಉದ್ಯಮಿ ಪೃಥ್ವೀರಾಜ ಆಚಾರ್ಯ ಕಿನ್ನಿಗೋಳಿ, ಕ್ಷೇತ್ರದ ಆಡಳಿತ ಮೊಕ್ತೇಸರ ಪಟೇಲ್ ವಾಸುದೇವ ರಾವ್,ಕಸ್ತೂರಿ ಪಂಜ, ಜೀರ್ಣೋದ್ಧಾರ ಸಮಿತಿಯ ಸುಧಾಕರ್ ರಾವ್ ,ಪಟೇಲ್ ವಿಶ್ವನಾಥ ರಾವ್ ,ಭುವನಾಭಿರಾಮ ಉಡುಪ, ದೇವಪ್ರಸಾದ ಪುನರೂರು,ಪುರಂದರ ಶೆಟ್ಟಿಗಾರ್,ಗೋಪಿನಾಥ ರಾವ್, ರಾಘವೇಂದ್ರ ರಾವ್ ಕೆರೆಕಾಡು,ರವಿ ಶೆಟ್ಟಿ, ಧನಂಜಯ ಶೆಟ್ಟಿಗಾರ್ ಪಕ್ಷಿಕೆರೆ,ಸುರೇಶ್ ರಾವ್ ನೀರಳಿಕೆ,ಚಂದ್ರಶೇಖರ್ ರಾವ್ ಎಸ್ಕೋಡಿ, ಮುರಳಿಧರ ಆಚಾರ್ಯ,ರಾಮ ಭಟ್, ರಾಘವೇಂದ್ರ ರಾವ್,
ಶಿವಪ್ರಸಾದ ಭಟ್ ಪುನರೂರು