ಲೋಕಮುಖಿ ಟ್ರಸ್ಟ್‌ನಿಂದ ಶೈಕ್ಷಣಿಕ ಕೊಡುಗೆ
Tuesday, July 15, 2025
ಕಿನ್ನಿಗೋಳಿ : ವಿದ್ಯಾರ್ಥಿಗಳು ಓದಿನೊಂದಿಗೆ ಸಾಧನೆ ಮಾಡಬೇಕು. ಪರಿಶ್ರಮದ ಓದು ಯಶಸ್ಸನ್ನು ನೀಡುತ್ತದೆ ಎಂದು ಚಿತ್ರ ನಿರ್ಮಾಪಕ, ಉದ್ಯಮಿ ಲಂಚು ಲಾಲ್ ಮಂಗಳೂರು ಹೇಳಿದರು.
ಅವರು ಕಿನ್ನಿಗೋಳಿ ನೇಕಾರ ಸೌಧದಲ್ಲಿ ಲೋಕಮುಖಿ ಟ್ರಸ್ಟ್ ವತಿಯಿಂದ ಆರ್ಥಿಕವಾಗಿ ಹಿಂದುಳಿದ ೮೫ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ, ಕೊಡೆ, ಚೀಲ, ನೀರಿನ ಬಾಟಲಿ ಇತ್ಯಾದಿ ಶೈಕ್ಷಣಿಕ ಪರಿಕರಗಳನ್ನು ವಿತರಿಸಿ ಮಾತನಾಡಿದರು.
ಹನ್ನೊಂದು ವಿದ್ಯಾರ್ಥಿಗಳಿಗೆ ಹಿರಿಯ ಕಾರ್ಯಕರ್ತ ದಿ. ನಾರಾಯಣ ಅಮೀನ್ ಮತ್ತಿತರರ ಪ್ರಾಯೋಜಕತ್ವದಲ್ಲಿ ವಿದ್ಯಾರ್ಥಿ ವೇತನ ನೀಡಲಾಯಿತು.
ಎನ್‌ಐಟಿಕೆ ಪ್ರಾಧ್ಯಾಪಕ ಡಾ. ಶ್ರೀಕಾಂತ ಸಸಿಹಿತ್ಲು, ಲೋಕಮುಖಿ ಟ್ರಸ್ಟ್‌ನ ಅಧ್ಯಕ್ಷ ಡಾ. ಸೋಂದಾ ಭಾಸ್ಕರ ಭಟ್, ಕಾರ್ಯದರ್ಶಿ ಮಾಧವ ಕೆರೆಕಾಡು, ಮೋಹನ್ ಕಟೀಲು, ಶ್ರೀಮತಿ ಯಶೋದಾ, ಕು. ಶಶಿಕಲಾ, ಧನಂಜಯ ಶೆಟ್ಟಿಗಾರ್, ಅರವಿಂದ ಬಿ. ವಿಶ್ವನಾಥ ಬಪ್ಪನಾಡು, ರಾಜೇಶ್ ದಾಸ್ ಮತ್ತಿತರರಿದ್ದರು.