-->
ಕಟೀಲು ಶಿಕ್ಷಣ ಸಂಸ್ಥೆಯಲ್ಲಿ ಉಚಿತ ಹಾರ್ಮೋನಿಯಂ ತರಗತಿ

ಕಟೀಲು ಶಿಕ್ಷಣ ಸಂಸ್ಥೆಯಲ್ಲಿ ಉಚಿತ ಹಾರ್ಮೋನಿಯಂ ತರಗತಿ

ಕಟೀಲು : ಸಾಹಿತ್ಯ ಸಂಗೀತಗಳಂತಹ ಕಲಾಸಕ್ತಿಯಿಂದ ಜೀವನೋತ್ಸಾಹ ಇರುತ್ತದೆ. ಕಟೀಲಮ್ಮ ಕಲಾಮಾತೆ ಎಂದು ಪ್ರಸಿದ್ಧಳು. ಆಕೆಯ ಸನ್ನಿಧಿಯಲ್ಲಿ ಕಲಿತು ಸಂಗೀತಕ್ಷೇತ್ರದಲ್ಲಿ ಸಾಧಕರಾಗುವಂತಾಗಲಿ ಎಂದು ಕಟೀಲು ದೇಗುಲದ ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ ಹೇಳಿದರು.
ಅವರು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಸಮೂಹ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ಹಳೆ ವಿದ್ಯಾರ್ಥಿ ಸಂಘದ ಸಂಯೋಜನೆಯಲ್ಲಿ ಉಚಿತ ಹಾರ್ಮೋನಿಯಂ ತರಗತಿಯನ್ನು ಉದ್ಘಾಟಿಸಿ ಮಾತನಾಡಿದರು.
ಹಳೆ ವಿದ್ಯಾರ್ಥಿ ಸಿತ್ಲ ಸುರೇಶ್ ರಾವ್, ಹಾರ್ಮೋನಿಯಂ ಶಿಕ್ಷಕ ವಾಸು ಮಾಸ್ತರ್, ಪದವೀಪೂರ್ವ ಕಾಲೇಜಿನ ಪ್ರಾಂಶುಪಾಲೆ ಕುಸುಮಾವತಿ, ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆಯ ಮುಖ್ಯಸ್ಥರಾದ ಗಿರೀಶ್ ತಂತ್ರಿ ಮತ್ತಿತರರಿದ್ದರು. ಉಪನ್ಯಾಸಕಿ ಸಂಧ್ಯಾ ನಿರೂಪಿಸಿದರು. 
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ