ಕೆಂಪು ಕಲ್ಲು ಹಾಗೂ ಮರಳು ಸಮಸ್ಯೆ ಬಗ್ಗೆ ರಾಜ್ಯ ಕಾಂಗ್ರೇಸ್ ಸರಕಾರದ ವೈಫಲ್ಯ ಖಂಡಿಸಿ ಜನಾಕ್ರೋಶ ಪ್ರತಿಭಟನೆ
Wednesday, July 16, 2025
ಕಿನ್ನಿಗೋಳಿ :ಕೆಂಪು ಕಲ್ಲು ಹಾಗೂ ಮರಳು ಸಮಸ್ಯೆ ಬಗ್ಗೆ ರಾಜ್ಯ ಕಾಂಗ್ರೇಸ್ ಸರಕಾರದ ವೈಫಲ್ಯ ಖಂಡಿಸಿ ಭಾರತೀಯ ಜನತಾ ಪಾರ್ಟಿ ಮೂಲ್ಕಿ ಮೂಡಬಿದಿರೆ ಮಂಡಲ ವತಿಯಿಂದ ಕಿನ್ನಿಗೋಳಿಯಲ್ಲಿ ಜನಾಕ್ರೋಶ ಪ್ರತಿಭಟನೆಯು ನಡೆಯಿತು.
ಪ್ರತಿಭಟನೆಯಲ್ಲಿ ಮೂಲ್ಕಿ ಮೂಡಬಿದಿರೆ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ ರಾಜ್ಯದಲ್ಲಿ ಕೆಂಪುಕಲ್ಲು ಹಾಗೂ ಮರಳು ಸಮಸ್ಯೆಯಿಂದಾಗಿ ಮನೆ ನಿರ್ಮಾಣ ಹಾಗೂ ಅಭಿವೃದ್ದಿ ಕಾಮಗಾರಿಗಳು ಸ್ತಗಿತಗೊಂಡಿದೆ.ಸಾವಿರಾರು ಕಟ್ಟಡ ಕಾರ್ಮಿಕರು,ಲಾರಿ ಮಾಲಕರು ಹಾಗೂ ಚಾಲಕರು ಉದ್ಯೋಗವಿಲ್ಲದೆ ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಜನಸಾಮಾನ್ಯರ ಬದುಕು ತೀರ ಕಷ್ಟಕರವಾಗಿದೆ. ಅಸ್ತಿತ್ವದಲ್ಲಿರುವ ಕಾಂಗ್ರೇಸ್ ಸರಕಾರ ಜನ ಸಮಸ್ಯೆಗಳಿಗೆ ಸ್ಪಂದಿಸದೆ ನಿರ್ಲಕ್ಷ್ಯ ತೋರುತ್ತಿದ್ದು, ಲಾಭದ ವಲಯಗಳಿಗೆ ಮಾತ್ರ ಸೌಲಭ್ಯ ಒದಗಿಸುತ್ತಿದೆ ಎಂದರು.
ಮಂಡಲಾಧ್ಯಕ್ಷ ದಿನೇಶ್ ಪುತ್ರನ್ ಮಾತನಾಡಿ ಬಿಜೆಪಿ ಶಕ್ತಿಯಿಂದ ಈ ಸಮಸ್ಯೆಗೆ ಸ್ಪಷ್ಟವಾಗಿ ಧ್ವನಿ ಎತ್ತುತ್ತಿದೆ. ಜನಪ್ರತಿನಿಧಿಗಳಾಗಿ ನಾವು ಸಮ್ಮುಖವಾಗಿ ಬಂದು ಜನಸಾಮಾನ್ಯರ ಧ್ವನಿಗೆ ನುಡಿ ನೀಡುತ್ತಿದ್ದೇವೆ. ಕಾಂಗ್ರೆಸ್ ಸರ್ಕಾರದ ದುರ್ಬಲ ನೀತಿ ಹಾಗೂ ಲಂಚದ ವ್ಯವಸ್ಥೆ ಈ ಸಮಸ್ಯೆಗೆ ಕಾರಣವಾಗಿದೆ ಎಂದರು.
ಈ ಪ್ರತಿಭಟನೆಯಲ್ಲಿ ಜಿಲ್ಲಾ ಉಪಾಧ್ಯಕ್ಷ ಸುನಿಲ್ ಆಳ್ವ, ಶಾಂತಿ ಪ್ರಸಾದ್ ಹೆಗ್ಡೆ, ಪ್ರಧಾನ ಕಾರ್ಯದರ್ಶಿ ರಂಜಿತ್ ತೋಡಾರ್ ಹರೀಶ್ ಶೆಟ್ಟಿ, ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷೆ ಕಸ್ತೂರಿ ಪಂಜ,ಬಿಜೆಪಿ ಮುಖಂಡರುಗಳಾದ ಭುವನಾಭಿರಾಮ ಉಡುಪ, ಈಶ್ವರ್ ಕಟೀಲ್, ಅಭಿಲಾಷ್ ಶೆಟ್ಟಿ ಕಟೀಲ್, ಸತೀಶ್ ಅಂಚನ್, ನವೀನ್ ರಾಜ್, ಶೈಲೇಶ್ ಕುಮಾರ್, ರಂಗನಾಥ ಶೆಟ್ಟಿ, ಅಶ್ವತ್ ಪಣಪಿಲ, ಆಶಾ ರತ್ನಾಕರ, ಸರೋಜಿನಿ ಗುಜರನ್, ಹೇಮಲತಾ, ಬಜಪೆ ವಲಯ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಲೋಕೇಶ್ ಪೂಜಾರಿ ಬಜ್ಪೆ , ಬಳ್ಕುಂಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಮತ ಪೂಂಜಾ , ಹಳೆಯಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಪೂರ್ಣಿಮಾ, ಪಡು ಪಣಂಬೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಕುಸುಮ ಚಂದ್ರಶೇಖರ್, ಮೂಡಬಿದ್ರಿ ಪುರಸಭೆ ಅಧ್ಯಕ್ಷೆ ಜಯಶ್ರೀ ಕೇಶವ್, ಉಪಾಧ್ಯಕ್ಷ ನಾಗೇಶ್ ಪೂಜಾರಿ ಒಂಟಿಕಟ್ಟೆ, ಯುವ ಮೋರ್ಚಾ ಅಧ್ಯಕ್ಷ ಕುಮಾರ್ ಪ್ರಸಾದ್ ತೋಡಾರು, ವಿನೋದ್ ಕುಮಾರ್ ಬೊಳ್ಳೂರು, ಜೀವನ್ ಪ್ರಕಾಶ್, ಲಕ್ಶ್ಮಣ ಸಾಲ್ಯಾನ್ ಪುನರೂರು, ಪುರುಷೋತ್ತಮ ಶೆಟ್ಟಿಗಾರ್ ಮತ್ತು ಬಿಜೆಪಿ ಪಕ್ಷದ ಕಾರ್ಯಕರ್ತರುಗಳು, ಗಣ್ಯರು ಹಾಗೂ ಮೊದಲಾದವರು ಉಪಸ್ಥಿತರಿದ್ದರು. ಅಭಿಲಾಷ್ ಶೆಟ್ಟಿ ಕಟೀಲ್ ಸ್ವಾಗತಿಸಿದರು, ಸೋಮನಾಥ್ ತೋಕೂರು ಕಾರ್ಯಕ್ರಮ ನಿರೂಪಿಸಿದರು.