
ಜು.20:ಗುರುಪುರದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ
Wednesday, July 16, 2025
ಕೈಕಂಬ : ವಿಶ್ವ ಹಿಂದೂ ಪರಿಷತ್ ಬಜರಂಗದಳ ಮಾತೃಶಕ್ತಿ, ದುರ್ಗಾವಾಹಿನಿ ವಜ್ರದೇಹಿ ಘಟಕ ಗುರುಪುರ, ಎಜೆ ವೈದ್ಯಕೀಯ ಮಹಾ ವಿದ್ಯಾಲಯ ಆಸ್ಪತ್ರೆ ಇವರ ಸಹಯೋಗದಲ್ಲಿ ಜು. 20ರಂದು ದಿ. ಸುಹಾಸ್ ಶೆಟ್ಟಿ ಸ್ಮರಣಾರ್ಥ ಗುರುಪುರ ಕುಕ್ಕುದಕಟ್ಟೆಯ ವೈದ್ಯನಾಥ ಸಭಾಭವನದಲ್ಲಿ ರಕ್ತದಾನ ಶಿಬಿರ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ.
ಶಿಬಿರದಲ್ಲಿ ಸಾಮಾನ್ಯ ಆರೋಗ್ಯ ತಪಾಸಣೆ, ಕಿವಿ-ಮೂಗು-ಗಂಟಲು ತಪಾಸಣೆ, ದಂತ ಚಿಕಿತ್ಸೆ, ಚರ್ಮರೋಗ ಮತ್ತು ಕಣ್ಣಿನ ತಪಾಸಣೆ(ಕನ್ನಡಕ ನೀಡಲಾಗುವುದು), ಉಚಿತವಾಗಿ ಕಣ್ಣಿನ ಪೊರೆಯ ಶಸ್ತ್ರಚಿಕಿತ್ಸೆ, ಮಧುಮೇಹ, ಬಿಪಿ ಪರೀಕ್ಷೆ ಹಾಗೂ ಹೃದಯ ಸಂಬಂಧಿ ರೋಗ ತಪಾಸಣೆ(ಇಸಿಜಿ) ನಡೆಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.