ತೋಕೂರಿನಲ್ಲಿ ಆಟಿದ ನೆಂಪು ಕಾರ್ಯಕ್ರಮ
Wednesday, July 30, 2025
ತೋಕೂರು:ಗ್ರಾಮೀಣ ಮಾಹಿತಿ ತಂತ್ರಜ್ಞಾನ ಯುವ ಅಭಿವೃದ್ಧಿ ಕೇಂದ್ರ ಜಿಲ್ಲಾ ಮತ್ತು ರಾಜ್ಯ ಪ್ರಶಸ್ತಿ ವಿಜೇತ ಯುವಕ ಸಂಘ ಮತ್ತು ಮಹಿಳಾ ಮಂಡಲ ತೋಕೂರು ರೋಟರಿ ಸಮುದಾಯ ದಳ ತೋಕೂರು ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಆಟಿದ ನೆಂಪು ಕಾರ್ಯಕ್ರಮದಲ್ಲಿ ಜಾನಪದ ವಿದ್ವಾಂಸ ಕಲಾವಾರಿಧಿ ಸುರೇಶ ಕೊಲಕಾಡಿಯವರು ಮಾತನಾಡಿ ತುಳು ಪಾಡ್ದನ ಗಳಲ್ಲಿ ತುಳುನಾಡ ಸಂಸ್ಕೃತಿ ಹಾಗೂ ಇತಿಹಾಸ ಅಡಗಿದೆ ಅದನ್ನು ಕಲಿತು ಬೆಳೆಸುವುದು ತುಳುನಾಡಿನವರಾದ ನಮ್ಮೆಲ್ಲರ ಆದ್ಯ ಕರ್ತವ್ಯ ಎಂದರು. ಸಮುದಾಯ ದಳದ ಅಧ್ಯಕ್ಷ ಪರಮೇಶ್ವರ ಶೆಟ್ಟಿಗಾರ್, ಸ್ಥಾಪಕ ಸದಸ್ಯ ಲೋಕಯ್ಯ ಸಾಲ್ಯಾನ್, ಹಿರಿಯ ಸದಸ್ಯ ಸುಬ್ರಹ್ಮಣ್ಯ ರಾವ್, ಪಡುಪಣಂಬೂರು ಗ್ರಾಮ ಪಂಚಾಯತ್ ನ ಉಪಾಧ್ಯಕ್ಷ ಹೇಮನಾಥ ಅಮೀನ್ ,ಪಂಚಾಯತ್ ಸದಸ್ಯರುಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಮಹಿಳಾ ಸದಸ್ಯೆಯರುಗಳು ಉಪಸ್ಥಿತರಿದ್ದರು. ಮಹಿಳಾ ಮಂಡಲದ ಅಧ್ಯಕ್ಷೆ ಪ್ರಫುಲ್ಲಾ ಆರ್ ಶೆಟ್ಟಿ ಸ್ವಾಗತಿಸಿ ಯುವಕ ಸಂಘದ ಅಧ್ಯಕ್ಷ ವಾಮನ ಎಸ್ ದೇವಾಡಿಗ ವಂದಿಸಿದರು. ಹರಿದಾಸ್ ಭಟ್ ಮುಖ್ಯ ಅತಿಥಿಗಳ ಪರಿಚಯವನ್ನು ತಿಳಿಸಿದರು ಶ್ರೀಮತಿ ಸರಿತ ಕಾರ್ಯಕ್ರಮ ನಿರೂಪಿಸಿದರು. ಜಂಟಿ ಸಂಸ್ಥೆಗಳ ಸದಸ್ಯರುಗಳು ತಮ್ಮ ತಮ್ಮ ಮನೆಗಳಲ್ಲಿಯೇ ತಯಾರಿಸಿ ತಂದ ಹಿಂದಿನ ಕಾಲದ ಸತ್ವಭರಿತ ಆಹಾರಗಳನ್ನು ಸಹಭೋಜನ ಪದ್ದತಿಯಲ್ಲಿ ಸವಿದರು.