-->
ಹಳೆಯಂಗಡಿ: ದೇವಾಡಿಗ ಸಮಾಜ ಸೇವಾ ಸಂಘ (ರಿ)ಪಾವಂಜೆ ಇದರ 2024-25 ನೇ ಸಾಲಿನ ವಾರ್ಷಿಕ ಮಹಾಸಭೆ

ಹಳೆಯಂಗಡಿ: ದೇವಾಡಿಗ ಸಮಾಜ ಸೇವಾ ಸಂಘ (ರಿ)ಪಾವಂಜೆ ಇದರ 2024-25 ನೇ ಸಾಲಿನ ವಾರ್ಷಿಕ ಮಹಾಸಭೆ

ಹಳೆಯಂಗಡಿ: ದೇವಾಡಿಗ ಸಮಾಜ ಸೇವಾ ಸಂಘ (ರಿ)ಪಾವಂಜೆ ಇದರ 2024-25 ನೇ ಸಾಲಿನ ವಾರ್ಷಿಕ ಮಹಾಸಭೆಯು ಸಂಘದ ಕಲಾ ವೇದಿಕೆಯಲ್ಲಿ ನಡೆಯಿತು.ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ  ಅಣ್ಣಪ್ಪ ದೇವಾಡಿಗ ಪಕ್ಷಿಕೆರೆ ವಹಿಸಿದ್ದರು. 
 ಶ್ರೀಮತಿ ಜಯಶ್ರೀ ಯಾದವ್ ರವರ ಪ್ರಾರ್ಥನೆ ಯೊಂದಿಗೆ ಸಭೆಯು ಪ್ರಾರಂಭಗೊಂಡಿತು.

ಕಾರ್ಯದರ್ಶಿ ನಿಖಿಲ್ ದೇವಾಡಿಗ 2024 - 25 ನೇ ಸಾಲಿನ ವರದಿ ವಾಚಿಸಿದರು.ಈ ಸಾಲಿನ ಆಯವ್ಯಯ ಪತ್ರವನ್ನು ಕೋಶಾಧಿಕಾರಿ  ಸುಬ್ರತ್ ದೇವಾಡಿಗ ಸಭೆಯಲ್ಲಿ ಪ್ರಸ್ತುತ ಪಡಿಸಿದರು.  ಕಟ್ಟಡದ ನೆಲ ಅಂತಸ್ತು ನಿರ್ಮಾಣವಾದ ಬಳಿಕ ಮುಂದಿನ ಹೆಜ್ಜೆಯ ಬಗ್ಗೆ ಹಾಗೂ ಸಂಘವು  ನಡೆದು ಬಂದ ದಾರಿಯ ಬಗ್ಗೆ ಕಟ್ಟಡ ಸಮಿತಿ ಕಾರ್ಯಾಧ್ಯಕ್ಷ  ಯಾದವ ದೇವಾಡಿಗ, ಪ್ರಧಾನ ಕಾರ್ಯದರ್ಶಿ ಜನಾರ್ಧನ್ ಪಡುಪಣಂಬೂರು, ಉಪಾಧ್ಯಕ್ಷ  ಜೀವನ ಪ್ರಕಾಶ್ ಕಾಮೇರೊಟ್ಟು,ಟ್ರಸ್ಟಿನ ಅಧ್ಯಕ್ಷ ರಮೇಶ್ ಕುಮಾರ್ ತೋಕೂರು,ಮಾತನಾಡಿದರು.


ಕಟ್ಟಡ ಸಮಿತಿಯ ಕಾರ್ಯಧ್ಯಕ್ಷ  ಯಾದವ ದೇವಾಡಿಗ, ಸಂಘದ ಉಪಾಧ್ಯಕ್ಷರುಗಳಾದ  ರಘು ದೇವಾಡಿಗ,ಜಗದೀಶ್ ಪಲಿಮಾರ್, ಸತೀಶ್ ಇಂದಿರಾನಗರ,ಕಾರ್ಯದರ್ಶಿ ನಿಖಿಲ್ ದೇವಾಡಿಗ, ಕೋಶಾಧಿಕಾರಿ   ಸುಬ್ರತ್ ದೇವಾಡಿಗ,ಸೇವಾ ಟ್ರಸ್ಟಿನ ಅಧ್ಯಕ್ಷ  ರಮೇಶ್ ಕುಮಾರ್ ತೋಕೂರು,ಮಹಿಳಾ ವೇದಿಕೆಯ ಅಧ್ಯಕ್ಷ ಶ್ರೀಮತಿ ವಿಜಯಲಕ್ಷ್ಮಿ ಜನಾರ್ದನ, ಯುವ ವೇದಿಕೆಯ ಅಧ್ಯಕ್ಷ  ಗಣೇಶ್ ಪಂಜ,ಕಟ್ಟಡ ಸಮಿತಿ ಕೋಶಾಧಿಕಾರಿ  ಅಶೋಕ್ ಪಾವಂಜೆ,ಮಹಿಳಾ ವೇದಿಕೆಯ ಕಾರ್ಯದರ್ಶಿ ಶ್ರೀಮತಿ ಮಂಜುಳಾ ಸುಬ್ರತ್, ಕೋಶಾಧಿಕಾರಿ  ಶ್ರೀಮತಿ ಅನುಪಮಾ ಅಶೋಕ್,ಯುವ ವೇದಿಕೆ ಕಾರ್ಯದರ್ಶಿ  ಆನಂದ ದೇವಾಡಿಗ  ಹಾಗೂ ಸದಸ್ಯರು ಉಪಸ್ಥಿತರಿದ್ದರು.
 ಕಾರ್ಯದರ್ಶಿ  ನಿಖಿಲ್ ದೇವಾಡಿಗ ಸ್ವಾಗತಿಸಿದರು. ಪಡುಪಣಂಬೂರು, ಉಪಾಧ್ಯಕ್ಷ ಸತೀಶ್ ಇಂದಿರಾನಗರ ಇವರ ವಂದಿಸಿದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ