ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಾಗರಪಂಚಮಿ ಸಂಭ್ರಮ
Wednesday, July 30, 2025
ತೋಕೂರು: ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ತೋಕೂರು ಹಳೆಯಂಗಡಿ ಇಲ್ಲಿ ನಾಗರ ಪಂಚಮಿ ಹಬ್ಬವು ದೇವಳದ ಪ್ರಧಾನ ಅರ್ಚಕರಾದ ಟಿ ಕೆ ಮಧುಸೂಧನ್ ಆಚಾರ್ ನೇತೃತ್ವದಲ್ಲಿ ವಿಜೃಂಭಣೆಯಿಂದ ನಡೆಯಿತು. ನಾಗರ ಪಂಚಮಿ ಪ್ರಯುಕ್ತ ಬೆಳಿಗ್ಗೆ ವಿಶೇಷ ಸೀಯಾಳಾಭಿಷೇಕ, ಮಹಾಪೂಜೆ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಗುರುರಾಜ್ ಎಸ್ ಪೂಜಾರಿ, ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಪುರುಷೋತ್ತಮ ಕೋಟ್ಯಾನ್, ಸಂಪತ್ ಜೆ ಶೆಟ್ಟಿ ತೋಕೂರುಗುತ್ತು , ಅಶೋಕ್ ಕುಂದರ್, ಸವಿತಾ ಬೆಳ್ಳಾಯರು ಮತ್ತಿತರು ಉಪಸ್ಥಿತರಿದ್ದರು.