-->
ಸೂರಿಂಜೆ:ಮೂರುನಾಡು ಮಾಗಣೆ ಬ್ರಹ್ಮಸ್ಥಾನ ನಿರ್ಮಾಣದ ಸಮಾಲೋಚನಾ ಸಭೆ

ಸೂರಿಂಜೆ:ಮೂರುನಾಡು ಮಾಗಣೆ ಬ್ರಹ್ಮಸ್ಥಾನ ನಿರ್ಮಾಣದ ಸಮಾಲೋಚನಾ ಸಭೆ

ಸುರತ್ಕಲ್ : ಕುತ್ತೆತ್ತೂರು ಸೂರಿಂಜೆ ಮೂರುನಾಡು ಮಾಗಣೆ ಬ್ರಹ್ಮಸ್ಥಾನ ಪುನರ್ ನಿರ್ಮಾಣದ ಸಮಾಲೋಚನಾ ಸಭೆಯು ಪೊನ್ನಗಿರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಂಗಣದಲ್ಲಿ  ಜರಗಿತು.
ಸಭೆಯಲ್ಲಿ ಜಯ ಪ್ರಕಾಶ್ ಸೂರಿಂಜೆ ಪ್ರಾಸ್ತಾವಿಕವಾಗಿ ಮಾತನಾಡಿ ಮೂರು ನಾಡು ಮಾಗಣೆ ಮತ್ತು ಬ್ರಹ್ಮಸ್ಥಾನದ ವಿಶೇಷತೆಗಳನ್ನು ತಿಳಿಸಿ ಪಾಳು ಬಿದ್ದ ಬ್ರಹ್ಮಸ್ಥಾನದ ಪುನರ್‌ನಿರ್ಮಾಣದ ವಿಚಾರದಲ್ಲಿ ಸಾರ್ವಜನಿಕರು ಅಭಿಪ್ರಾಯ ಸೂಚಿಸಬೇಕು ಎಂದು ವಿನಂತಿಸಿದರು.
ಉದ್ಯಮಿ ಸಂತೋಷ್ ಶೆಟ್ಟಿ, ಬ್ರಹ್ಮಸ್ಥಾನ ಮಾತನಾಡಿ  ಬ್ರಹ್ಮಸ್ಥಾನ ಪುನರ್ ನಿರ್ಮಾಣಕ್ಕೆ ಬೇಕಾದ ಜಮೀನಿನ ದಾಖಲೆ ಪತ್ರಗಳಿಗಾಗಿ ಕಾನೂನು ಪ್ರಕ್ರಿಯೆಗಳು ಪೂರ್ಣಗೊಳ್ಳುವ ಹಂತದಲ್ಲಿವೆ.ಕರಡು ನಕಾಶೆ, ಬ್ರಹ್ಮಸ್ಥಾನದ ಹೆಸರಿನಲ್ಲಿ ಟ್ರಸ್ಟ್ ನಿರ್ಮಾಣ, ಬ್ಯಾಂಕ್ ಖಾತೆ ಮಾಡುವ ಕೆಲಸಗಳು ಪ್ರಗತಿಯಲ್ಲಿದೆ ಎಂದರು.
ಮೂಡಿತ್ತಾಯ ಹಯವದನ ಭಟ್ ಮಾತನಾಡಿ ಬ್ರಹ್ಮಸ್ಥಾನ ನಿರ್ಮಾಣದ ಬಗ್ಗೆ ಕೈಗೊಂಡ ಪೂರ್ವ ವಿಧಿ  ವಿಧಾನಗಳ ಬಗ್ಗೆ ಮಾಹಿತಿಯನ್ನು ನೀಡಿದರು. ವಿಜಯ ದಾಸ ಆಚಾರ್ಯ, ಜಗನ್ನಾಥ ಸಾಲ್ಯಾನ್ ಹೊಯ್ಗೆ ಮನೆ, ರವೀಂದ್ರ ಶೆಟ್ಟಿ ಕುತ್ತೆತ್ತೂರು, ಕರುಣಾಕರ ಶೆಟ್ಟಿ ಅಡಿಮಾರುಗುತ್ತು, ಎಸ್‌ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ, ಶಶಿಕಲಾ ಶೆಟ್ಟಿ ನಾಯರ್ ಕೋಡಿ, ವಿಶ್ವನಾಥ ಭಂಡಾರಿ ಪುಳಿತ್ತೂರು ಬಾಳಿಕೆ, ಯಾದವ ಶೆಟ್ಟಿಗಾರ್, ಸುಧಾಕರ ಶೆಟ್ಟಿ ಮಜಲಕೋಡಿ, ಪ್ರತಾಪ್‌ಶೆಟ್ಟಿ ಕಲ್ಲಂಜ ಮೊದಲಾದವರು ಸಭೆಯಲ್ಲಿ ತಮ್ಮ ಅಭಿಪ್ರಾಯಗಳನ್ನು ತಿಳಿಸಿದರು. ಈ ಸಂದರ್ಭ ಜಗನ್ನಾಥ ಅತ್ತಾರ್ ಕೊಡಿಪಾಡಿ ಬಾಳಿಕೆ,  ಸುಧಾಕರ ಶೇಣವ, ಸತೀಶ್ ಹೆಗ್ಡೆ ಮನೋಜ್ ಶೆಟ್ಟಿ, ಪ್ರದೀಪ್ ಶೆಟ್ಟಿ, ನವೀನ್ ಶೆಟ್ಟಿ, ಧನಂಜಯ ಶೆಟ್ಟಿ, ಜಗನ್ನಾಥ ಶೆಟ್ಟಿ, ಪ್ರಭಾಕರ ಸನಿಲ್ ಉಪಸ್ಥಿತರಿದ್ದರು. 
 ನಿಧಿ, ಕೃಪಾ ಪ್ರಾರ್ಥಿಸಿದರು. ಪ್ರಸಾದ್ ಅಂಚನ್ ಸ್ವಾಗತಿಸಿದರು. ಸತೀಶ್ ಶೆಟ್ಟಿ ಉಚ್ಚಿಲ ಕಾರ್ಯಕ್ರಮ ನಿರೂಪಿಸಿದರು. ವೀರೇಂದ್ರ ಶೆಟ್ಟಿ ವಂದಿಸಿದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ