ಕಷ್ಟದ ದಿನಗಳನ್ನು ಯುವ ಸಮುದಾಯಕ್ಕೆ ತಿಳಿಹೇಳಿ : ಜಯಂತ್ ನಡುಬೈಲ್
Friday, August 1, 2025
ಮೂಲ್ಕಿ : ಆಷಾಢ ತಿಂಗಳ ಕೃಷಿ ಬದುಕಿನ ಬಗ್ಗೆ ಯುವ ಸಮುದಾಯಕ್ಕೆ ತಿಳಿಹೇಳಬೇಕು, ಅಂದಿನ ಕಷ್ದದ ದಿನಗಳಲ್ಲಿ ಗ್ರಾಮೀಣ ಬದುಕು, ಸೊಗಡು, ಪರಂಪರೆ, ಸಂಪ್ರದಾಯ ನಮಗೆ ಮಾರ್ಗದರ್ಶಕವಾಗಿದೆ ಎಂದು ಪುತ್ತೂರು ಅಕ್ಷಯ ಕಾಲೇಜಿನ ಮುಖ್ಯಸ್ಥ ಜಯಂತ್ ನಡುಬೈಲ್ ಹೇಳಿದರು.
ಅವರು ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ಯುವವಾಹಿನಿ ಮೂಲ್ಕಿ ಘಟಕದಿಂದ ನಡೆದ 23 ನೇ ವರ್ಷದ ಆಟಿಡೊಂಜಿ ದಿನ ಕಾರ್ಯಕ್ರಮವನ್ನು ವಿಭಿನ್ನವಾಗಿ ಉದ್ಘಾಟಿಸಿ ಮಾತನಾಡಿದರು.
ರಥದಲ್ಲಿ ಬಂದ ಅಕ್ಕಿ ಮುಡಿಯಲ್ಲಿನ ಅಕ್ಕಿಯನ್ನು ತೆಗೆದು ಊಟದ ವ್ಯವಸ್ಥೆ ಮಾಡಲು ಅನುವು ಮಾಡಿಕೊಡುವ ಮೂಲಕ ಉದ್ಘಾಟಿಸಲಾಯಿತು.
"ತರವಾಡು" ತುಳು ಸಿನಿಮಾದ ನಿರ್ಮಾಪಕ, ನಾಯಕ ಶೋಧನ್ ಶೆಟ್ಟಿ ಪಡುಬಿದ್ರಿ ತಮ್ಮ ಸಿನಿಮಾದ ಬಗ್ಗೆ ಮಾಹಿತಿ ನೀಡಿದರು.
ಜನಪದ ವಿದ್ವಾಂಸ ದಿನೇಶ್ ಸುವರ್ಣ ರಾಯಿ ಆಟಿದ ಮದಿಪು ವಿಷಯದಲ್ಲಿ ಮಾತನಾಡಿದರು.
ಮೂಲ್ಕಿ ಯುವವಾಹಿನಿಯ ಅಧ್ಯಕ್ಷ ವಿನಯಕುಮಾರ್ ಮಟ್ಟು ಅಧ್ಯಕ್ಷತೆಯನ್ನು ವಹಿಸಿ ಸ್ವಾಗತಿಸಿದರು.
ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ವಾಮನ ಕೋಟ್ಯಾನ್ ನಡಿಕುದ್ರು, ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಲೋಕೇಶ್ ಕೋಟ್ಯಾನ್, ಕಾರ್ಯಕ್ರಮ ಸಂಚಾಲಕಿ ಶಕೀಲಾ ಹರೀಂದ್ರ ಸುವರ್ಣ, ಕೋಶಾಧಿಕಾರಿ ಪ್ರತೀಕ್ಷ್ ಸಾಲ್ಯಾನ್ ಉಪಸ್ಥಿತರಿದ್ದರು.
ಮಾಜಿ ಅಧ್ಯಕ್ಷ ಜಯಕುಮಾರ್ ಕುಬೆವೂರು ಪ್ರಸ್ತಾವನೆಗೈದರು, ಮಹೀಂ ಮೂಲ್ಕಿ ಸನ್ಮಾನ ಪತ್ರ ವಾಚಿಸಿದರು. ಕಾರ್ಯದರ್ಶಿ ಪ್ರೇರಣಾ ವಂದಿಸಿದರು, ಮಾಜಿ ಅಧ್ಯಕ್ಷ ನರೇಂದ್ರ ಕೆರೆಕಾಡು ಕಾರ್ಯಕ್ರಮ ನಿರೂಪಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನೃತ್ಯ ವೈವಿಧ್ಯ ನಡೆಯಿತು, ಸುಮಾರು ಒಂದೂವರೆ ಸಾವಿರ ಮಂದಿಗೆ ತುಳುನಾಡ ಖಾದ್ಯಗಳನ್ನು ಉಣಬಡಿಸಲಾಯಿತು.