ಜನರಲ್ಲಿ ಸ್ವಚ್ಚತೆಯ ಬಗ್ಗೆ ಅರಿವು ಮೂಡಿಸಬೇಕು - ಪ್ರಶಾಂತ್ ಬಾಳಿಗ
Tuesday, July 8, 2025
ಬಜಪೆ: ಜನರಲ್ಲಿ ಸ್ವಚ್ಚತೆಯ ಬಗ್ಗೆ ಅರಿವು ಮೂಡಿಸಬೇಕು ಹಾಗೂ ತಮ್ಮ ತಮ್ಮ ಆರೋಗ್ಯದ ಬಗ್ಗೆ ಗಮನ ಹರಿಸಬೇಕು ಎಂಬ ಸದುದ್ದೇಶದೊಂದಿಗೆ ಎಂ.ಆರ್.ಪಿ.ಎಲ್. ಸಂಸ್ಥೆ ಪ್ರತೀ ವರ್ಷ ಸ್ವಚ್ಚತಾ ಪಕ್ವಾಡದ ಮೂಲಕ ಸಮಾಜಮುಖಿ ಕಾರ್ಯಕ್ರಮಗಳನ್ನ
ಹಮ್ನಿಕೊಂಡಿದೆ ಎಂದು ಎಂ.ಆರ್.ಪಿ.ಎಲ್ ನ ಜನರಲ್ ಮ್ಯಾನೇಜರ್ ಪ್ರಶಾಂತ್ ಬಾಳಿಗ ಹೇಳಿದರು. ಅವರು ಭಾನುವಾರದಂದು ಎಂ.ಆರ್.ಪಿ.ಎಲ್ ವತಿಯಿಂದ ಪೆರ್ಮುದೆ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಎಫ್.ಎಮ್.ಎಮ್ ಸಿ.ಎಚ್ ಮತ್ತು ಇಂಡಿಯನ್ ಸೊಸೈಟಿ ಇವರ ಸಹಬಾಗಿತ್ವದಲ್ಲಿ ಫಾದರ್ ಮುಲ್ಲರ್ ಅಸ್ಪತ್ರೆಯ ಪರಿಣತಿ ವೈದ್ಯರ ತಂಡದೊಂದಿಗೆ ನಡೆದ ಸ್ವಚ್ಚತಾ ಪಕ್ವಾಡ 2025 ಪ್ರಯುಕ್ತ ವೈದ್ಯಕೀಯ ತಪಾಸಣೆ ಮತ್ತು ಕ್ಯಾನ್ಸರ್ ತಪಸಾಣಾ ಶಿಬಿರದಲ್ಲಿ ಮಾತನಾಡಿದರು. ಪೆರ್ಮುದೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಜ್ಯೋತಿ ಶೆಟ್ಟಿ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ನಂತರ ಫಾದರ್ ಮುಲ್ಲರ್ ಅಸ್ಪತ್ರೆಯ ಎಲ್ರೋಯ್ ಸಲ್ಡಾನ ಕ್ಯಾನ್ಸರ್ ರೋಗದ ಬಗ್ಗೆ, ಇದರ ಮುನ್ನೆಚರಿಕೆ ಕ್ರಮದ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಪಂಚಾಯತ್ ಉಪಾಧ್ಯಕ್ಷ ಸಂದೇಶ್ ಪೂಜಾರಿ, ಪಂಚಾಯತ್ ಅಭಿವೃದ್ದಿ ಅಧಿಕಾರಿ ರಮೇಶ್ ರಾಥೋಡ್, ಫಾದರ್ ಮುಲ್ಲರ್ ಅಸ್ಪತ್ರೆಯ ಸಂಯೋಜಕಿ
ದೀಪಿಕಾ ಎಂ.ಆರ್.ಪಿ.ಎಲ್ ಸಂಸ್ಥೆಯ ಎಂ.ಕೆ ರಾವ್, ಸಂಸ್ಥೆಯ ಸಿ.ಎಸ್ ಆರ್ ವಿಭಾಗದ ಮ್ಯಾನೇಜರ್ ಕೇಶವ ಪಾಟಳಿ ಮತ್ತಿತರರು ಉಪಸ್ಥಿತರಿದ್ದರು.
ಪಂಚಾಯತ್ ವ್ಯಾಪ್ತಿಯ ನೂರಾರು ಮಂದಿ ಶಿಬಿರದ ಪ್ರಯೋಜನ ಪಡೆದರು.