-->
ಕಟೀಲಿನಲ್ಲಿ ೨೧ನೇ ವರ್ಷದ ತಾಳಮದ್ದಲೆ ಸಪ್ತಾಹ ಪಾಂಡವಾನಾಂ ಧನಂಜಯಃ ಆರಂಭ

ಕಟೀಲಿನಲ್ಲಿ ೨೧ನೇ ವರ್ಷದ ತಾಳಮದ್ದಲೆ ಸಪ್ತಾಹ ಪಾಂಡವಾನಾಂ ಧನಂಜಯಃ ಆರಂಭ


ಕಟೀಲು : ಕಟೀಲು ತಾಳಮದ್ದಳೆ ಸಪ್ತಾಹಕ್ಕೆ ಪ್ರತಿ ವರ್ಷ ನಡೆಯುತ್ತಿದ್ದು ಕಲಾಭಿಮಾನಿಗಳು ಭಕ್ತರು ಸಹಕಾರ ನೀಡುತ್ತ ಕಲೆಯನ್ನು ಪ್ರೋತ್ಸಾಹಿಸುತ್ತಿರುವುದು ಅಭಿನಂದನೀಯ ಎಂದು ಕಟೀಲು ದೇವಳದ ಅರ್ಚಕ ವೆಂಕಟರಮಣ ಆಸ್ರಣ್ಣ ಹೇಳಿದರು
ಅವರು ಕಟೀಲಿನ ಸರಸ್ವತಿ ಸದನದಲ್ಲಿ ಸೋಮವಾರ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವತಿಯಿಂದ ನಡೆಯುವ ಇಪತ್ತೊಂದನೇ ವರ್ಷದ ತಾಳಮದ್ದಳೆ ಸಪ್ತಾಹ ಪಾಂಡವಾನಾಂ ಧನಂಜಯಃವನ್ನು ಉದ್ಘಾಟಿಸಿ ಮಾತನಾಡಿದರು.
ಕಟೀಲು ದೇವಳದ ಅರ್ಚಕರಾದ ಅನಂತಪದ್ಮನಾಭ ಆಸ್ರಣ್ಣ, ಕಮಲಾದೇವಿಪ್ರಸಾದ ಆಸ್ರಣ್ಣ, ಈಶ್ವರ್ ಕಟೀಲು, ಲೋಕಯ್ಯ ಸಾಲಿಯಾನ್ ,ದೊಡ್ಡಯ್ಯ ಮೂಲ್ಯ,ಯಕ್ಷಗಾನ ಕಲಾಪೋಷಕ ಪದ್ಮನಾಭ ಕಟೀಲು, ವಾಸುದೇವ ಆಚಾರ್ಯ ಕಿನ್ನಿಗೋಳಿ, ದಿನೇಶ್ ಶೆಟ್ಟಿ ಅಜಾರ್, ತಿಮ್ಮಪ್ಪ ಕೋಟ್ಯಾನ್, ಆದರ್ಶ್ ಶೆಟ್ಟಿ ಎಕ್ಕಾರು, ಕಿನ್ನಿಗೋಳಿ ರಾಮಮಂದಿರದ ರಾಜೇಶ್ ನಾಯಕ್, ಯಕ್ಷಧರ್ಮಬೋಧಿನೀ ಟ್ರಸ್ಟ್‌ನ ರವಿರಾಜ್ ಆಚಾರ್ಯ  ಬಜಪೆ, ಪ್ರಭಾಕರ್ ರಾವ್ ಉಪಸ್ಥಿತರಿದ್ದರು. ವಾಸುದೇವ ಶಣೈ ನಿರೂಪಿಸಿದರು. ನಂತರ ಖ್ಯಾತ ಕಲಾವಿದರಿಂದ ಶರಸೇತು ಯತಿಪೂಜೆ ತಾಳಮದ್ದಳೆ ನಡೆಯಿತು. ಮುಂದಿನ ಭಾನುವಾರ ತಾಳಮದ್ದಲೆ ಸಪ್ತಾಹ ಸಮಾರೋಪಗೊಳ್ಳಲಿದೆ.

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ