-->
ಉಚಿತ ನೇತ್ರ ತಪಾಸಣೆ ಮತ್ತು ಉಚಿತ ಕನ್ನಡಕ್ಕ ವಿತರಣಾ  ಶಿಬಿರ

ಉಚಿತ ನೇತ್ರ ತಪಾಸಣೆ ಮತ್ತು ಉಚಿತ ಕನ್ನಡಕ್ಕ ವಿತರಣಾ ಶಿಬಿರ

ಮೂಡಬಿದ್ರೆ: ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ (ರಿ) ಮೂಡಬಿದ್ರೆ ವಲಯ, ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿಯವರ  ಹುಟ್ಟುಹಬ್ಬದ ಪ್ರಯುಕ್ತ,  ಪ್ರಸಾದ್ ನೇತ್ರಾಲಯ ಮಂಗಳೂರು,  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ, ಎಸ್ಸಿಲೋರ್ ಮಿಷನ್ ಪೌಂಡೇಷನ್ ಟ್ರಸ್ಟ್,  ಡಾ.ಪಿ ದಯಾನಂದ ಪೈ ಮತ್ತು ಪಿ ಸತೀಶ್ ಪೈ ಚಾರಿಟೇಬಲ್ ಟ್ರಸ್ಟ್, ಹಾಗೂ ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್  ಜಂಟಿ ಸಹಯೋಗದೊಂದಿಗೆ   ಉಚಿತ ನೇತ್ರ ತಪಾಸಣೆ ಮತ್ತು ಉಚಿತ ಕನ್ನಡಕ್ಕ ವಿತರಣಾ  ಶಿಬಿರ ಸುನಂದ ಮಾಧವ ಸಭಾಭವನ ಕೆಸರು ಗದೆಯಲ್ಲಿ ನಡೆಯಿತು. ಬೆಳುವಾಯಿ ಗ್ರಾಮ ಪಂಚಾಯತ್ ಅಧ್ಯಕ್ಷ  ಸುರೇಶ್ ಪೂಜಾರಿ  ಶಿಬಿರವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ  ಸಂಘ ಸಂಸ್ಥೆಗಳು ಜನಪಯೋಗಿ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದು ಅದರ ಸದ್ದೂಪಯೋಗ ಪಡೆದುಕೊಳ್ಳಬೇಕು ಎಂದರು. ಒಡಿಯೂರು ಗ್ರಾಮ ವಿಕಾಸ ಯೋಜನೆಯ ಯೋಜನಾ ನಿರ್ದೇಶಕ  ಕಿರಣ್ ಯು ಅಧ್ಯಕ್ಷತೆಯನ್ನು ವಹಿಸಿದ್ದರು.
  ಈ ಸಂದರ್ಭ ಪ್ರಸಾದ್ ನೇತ್ರಾಲಯದ ವೈದ್ಯ  ಡಾ ಪ್ರೇಮ್, ಗ್ರಾಮ ವಿಕಾಸ ಯೋಜನೆಯ ಸೇವಾ ದೀಕ್ಷಿತೆ ಅನಿತಾ ಸ್ವಾಗತಿಸಿದರು. ಮೇಲ್ವಿಚಾರಕ ಸುಮಿತ್ರ ಕಾರ್ಯಕ್ರಮ ನಿರೂಪಿಸಿದರು. ರೋಹಿಣಿ ಆರ್ ಧನ್ಯವಾದವಿತ್ತರು.  ನೂರಾರು ಮಂದಿ ಈ ಶಿಬಿರದಲ್ಲಿ ಭಾಗವಹಿಸಿದ್ದು, ೭೫ ಮಂದಿಗೆ ಉಚಿತ ಕನ್ನಡಕ್ಕ ವಿತರಿಸಲಾಯಿತು,  ೨೫ ಮಂದಿಗೆ ಉಚಿತ ಶಸ್ತ್ರ ಚಿಕಿತ್ಸೆಯ ಅಗತ್ಯವಿದ್ದು ಅದನ್ನೂ ಕೂಡ ಉಚಿತವಾಗಿ ಮಾಡಿಕೊಡಲಾಗುವುದು ಎಂದು ತಿಳಿಸಿದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ