ಆ.2:ಮುಂಬೈ ಕುರ್ಲ ಬಂಟರ ಭವನದಲ್ಲಿ ಆಸ್ರಣ್ಣಸಂಸ್ಮರಣೆ ಮತ್ತು ಯಕ್ಷಗಾನ ಸಮಾರಾಧನೆಯ ತ್ರಿಶಂತ್ ಉತ್ಸವ
Tuesday, July 8, 2025
ಕಟೀಲು:ಕೀರ್ತಿ ಶೇಷ ಗೋಪಾಲಕೃಷ್ಣ ಆಸ್ರಣ್ಣ ಸಂಸ್ಮರಣಾ ಸಮಿತಿ ಮುಂಬೈ ಯು.ಎ.ಇ ವತಿಯಿಂದ ಅಗಸ್ಟ್ 2 ರಂದು ಮುಂಬೈ ಕುರ್ಲ ಬಂಟರ ಭವನದಲ್ಲಿ ಆಸ್ರಣ್ಣ ಸಂಸ್ಮರಣೆ ಮತ್ತು ಯಕ್ಷಗಾನ ಸಮಾರಾಧನೆಯ ತ್ರಿಶಂತ್ ಉತ್ಸವವು ನಡೆಯಲಿದ್ದು ,ಇದರ ಅಮಂತ್ರಣ ಪತ್ರಿಕೆ ಬಿಡುಗಡೆ ಕಟೀಲು ದೇವಳದಲ್ಲಿ ನಡೆಯಿತು. ಕಟೀಲು ದೇವಳದ ಪ್ರಧಾನ ಅರ್ಚಕರಾದ ವೇ.ಮೂ.ಲಕ್ಷೀ ನಾರಾಯಣ ಆಸ್ರಣ್ಣ ಮತ್ತು ಕಮಲಾ ದೇವಿಪ್ರಸಾದ್ ಆಸ್ರಣ್ಣ ಅಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು. ನಂತರ ಮಾತನಾಡಿದ ವೇ.ಮೂ ಲಕ್ಷೀನಾರಾಯಣ ಆಸ್ರಣ್ಣ ಕಳೆದ 30 ವರ್ಷಗಳಿಂದ
ದಿ. ಗೋಪಾಲಕೃಷ್ಣ ಆಸ್ರಣ್ಣ ಅವರ ಸಂಸ್ಮರಣಾ ಕಾರ್ಯಕ್ರಮವನ್ನು ಆಸ್ರಣ್ಣ ಅಭಿಮಾನಿಗಳು ಹಮ್ಮಿಕೊಂಡು ಬಂದಿದ್ದಾರೆ.ಈ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಮುಂಬೈಯಲ್ಲಿನ ಕಟೀಲಿನ ಭಕ್ತರು ಸಂಪೂರ್ಣ ಸಹಕಾರ ನೀಡುತ್ತಿರುವುದು ಅಭಿನಂದನೀಯ. ಜಾಗತಿಕ ಬಂಟರ ಸಂಘದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿಯವರು ಸಂಸ್ಮರಣಾ ಕಾರ್ಯಕ್ರಮವನ್ನು ಪ್ರಾರಂಭದಲ್ಲಿ ಉದ್ಘಾಟನೆ ಮಾಡಿದ್ದು ನಂತರದ ದಿನಗಳಲ್ಲಿ ವರ್ಷದಿಂದ ವರ್ಷಕ್ಕೆ ವಿಜೃಂಭಣೆಯಿಂದ ಕಾರ್ಯಕ್ರಮ ನಡೆಯುತ್ತಾ ಬಂದಿದೆ ಎಂದರು. ಈ ಸಂದರ್ಭ ಗೋಪಾಲಕೃಷ್ಣ ಸಂಸ್ಮರಣಾ ಸಮಿತಿ ಅಧ್ಯಕ್ಷ ಪದ್ಮನಾಭ ಕಟೀಲು ಉಪಸ್ಥಿತರಿದ್ದರು. ಅಗಸ್ಟ್ 2 ರಂದು ಕಟೀಲು ಮೇಳದ ಆಯ್ದ ಕಲಾವಿದರಿಂದ ಶ್ರೀ ದೇವಿಮಹಾತ್ಮೆ ಯಕ್ಷಗಾನ ನಡೆಯಲಿದೆ.