ಲಯನ್ಸ್ ಕ್ಲಬ್ ಮೂಲ್ಕಿ, ಲಿಯೋ ಕ್ಲಬ್ ಮೂಲ್ಕಿ ಹಾಗೂ ಎ. ಜೆ ದಂತ ವೈದ್ಯಕೀಯ ಮಹಾ ವಿದ್ಯಾಲಯ ಕುಂಟಿಕಾನ ಮಂಗಳೂರು ಇದರ ಸಂಯುಕ್ತ ಆಶ್ರಯದಲ್ಲಿ ಉಚಿತ ದಂತ ತಪಾಸಣೆ ಕಾರ್ಯಕ್ರಮ
Wednesday, July 16, 2025
ಮೂಲ್ಕಿ:ಲಯನ್ಸ್ ಕ್ಲಬ್ ಮೂಲ್ಕಿ, ಲಿಯೋ ಕ್ಲಬ್ ಮೂಲ್ಕಿ ಹಾಗೂ ಎ. ಜೆ ದಂತ ವೈದ್ಯಕೀಯ ಮಹಾ ವಿದ್ಯಾಲಯ ಕುಂಟಿಕಾನ ಮಂಗಳೂರು ಇದರ ಸಂಯುಕ್ತ ಆಶ್ರಯದಲ್ಲಿ ಕಾರ್ನಾಡು ಸಿ ಎಸ್ ಐ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಉಚಿತ ದಂತ ತಪಾಸಣೆ ಕಾರ್ಯಕ್ರಮವು ಮೂಲ್ಕಿ ಲಯನ್ಸ್ ಕ್ಲಬ್ಬಿನ ಅಧ್ಯಕ್ಷ ಹರ್ಷರಾಜ ಶೆಟ್ಟಿ ಜಿ ಎಂ ರವರ ಅಧ್ಯಕ್ಷತೆಯಲ್ಲಿ ಜರುಗಿತು. ಲಯನ್ಸ್ ವಲಯಾಧ್ಯಕ್ಷ ಪೌಲ್ ರೋಲ್ಪಿ ಡಿ ಕೋಸ್ತ ಕಾರ್ಯಕ್ರಮ ಉದ್ಘಾಟಿಸಿದರು.
ವೇದಿಕೆಯಲ್ಲಿ ದಂತ ವೈದ್ಯ ಡಾ ರಶ್ಮಿ, ಶಾಲಾ ಸಂಚಾಲಕ ರಂಜನ್ ಜತ್ತನ್ನ, ಮಾಜೀ ಸಂಚಾಲಕ ಸ್ಯಾಮ್ ಮಾಬೆನ್,ಶಾಲಾ ಮುಖ್ಯೋಪಾಧ್ಯಾಯಿನಿ ಶಾಂತಿ ಸುಹಾಸಿನಿ ಕರ್ಕಡ ,ಲ. ಉದಯ ಅಮೀನ್ ,,ಲ. ಸುಶೀಲ್ ಬಂಗೇರ ,ಲಿಯೋ ಕ್ಲಬ್ ನಿಕಟಪೂರ್ವ ಅಧ್ಯಕ್ಷೆ ಸಿಂಚನ ಸನೀಲ್ ಉಪಸ್ಥಿತರಿದ್ದರು.
ಹರ್ಷ ರಾಜ್ ಶೆಟ್ಟಿ ಜಿ.ಎಂ ಸ್ವಾಗತಿಸಿದರು. ಪುಷ್ಪಲತಾ ವಂದಿಸಿದರು.ಝೀಟಾ ಮೆಂಡೋನ್ಸಾ ಮತ್ತು ಪ್ರತೀಕಾ ಕಾರ್ಯಕ್ರಮ ನಿರೂಪಿಸಿದರು.
ಶಿಬಿರದಲ್ಲಿ 200 ವಿದ್ಯಾರ್ಥಿಗಳ ಉಚಿತ ದಂತ ತಪಾಸಣೆ ನಡೆಸಲಾಯಿತು.