ಮೂಲ್ಕಿ ಶ್ರೀ ನಾರಾಯಣ ಗುರು ವಿದ್ಯಾ ಸಂಸ್ಥೆ, ನೇಜಿ ಕೃಷಿ ಕುರಿತು ಶೈಕ್ಷಣಿಕ ಪ್ರವಾಸ
Wednesday, July 16, 2025
ಮೂಲ್ಕಿ: ಶ್ರೀ ನಾರಾಯಣ ಗುರು ವಿದ್ಯಾ ಸಂಸ್ಥೆ ಮೂಲ್ಕಿ ಇಲ್ಲಿನ 8ನೇ ಮತ್ತು 10ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಕೃಷಿ ಜ್ಞಾನವರ್ಧನೆಯ ಉದ್ದೇಶದಿಂದ ಶೈಕ್ಷಣಿಕ ಪ್ರವಾಸ ಆಯೋಜಿಸಲಾಗಿತ್ತು. ವಿಜ್ಞಾನ ವಿಭಾಗದ ಅಧ್ಯಾಪಕಿ ಶ್ರೀಮತಿ ಲೋಲಾಕ್ಷಿ ಪಿ. ಸಾಲಿಯಾನ್ ಹಾಗೂ ಸಮಾಜ ವಿಜ್ಞಾನಶಿಕ್ಷಕ ಪ್ರಥ್ವಿ ರಾಜ್ ಅವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ನಡೆಯಿತು.
ಗೈಡ್ ಕ್ಯಾಪ್ಟನ್ ಸಾವಿತ್ರಿ ಅವರ ನೇತೃತ್ವದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ತಂಡದ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಸ್ಥಳೀಯ ಕೃಷಿಕ ತಾರಾನಾಥ್ ಅವರ ಕೃಷಿಭೂಮಿಗೆ ಭೇಟಿ ನೀಡಿ ನೇಜಿ ಕೃಷಿಯ ಪ್ರಕ್ರಿಯೆ, ಅದರ ಉಪಯೋಗಗಳು ಮತ್ತು ನೆಡುವ ವಿಧಾನಗಳ ಕುರಿತು ವಿವರವಾದ ಮಾಹಿತಿ ಪಡೆದು, ನೇರ ಪ್ರಾತ್ಯಕ್ಷಿಕೆಯನ್ನೂ ವೀಕ್ಷಿಸಿದರು.
ಶಾಲಾ ಆಡಳಿತಾಧಿಕಾರಿ ಶ್ರೀಮತಿ ಮಂಜುಳಾ ಕೆ. ವಿ ಅವರು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಿದರು.