ಕಿನ್ನಿಗೋಳಿ ರೋಟರಿ ಕ್ಲಬ್ ನ 2025-26ನೇ ಸಾಲಿನ ನೂತನ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ,ಅಧ್ಯಕ್ಷರಾಗಿ ಸಾಯಿನಾಥ ಶೆಟ್ಟಿ
Wednesday, July 16, 2025
ಕಿನ್ನಿಗೋಳಿ:ಕಿನ್ನಿಗೋಳಿ ರೋಟರಿ ಕ್ಲಬ್ ನ 2025-26ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಸೋಮವಾರ ಕಿನ್ನಿಗೋಳಿಯ ರೇಷ್ಮ ಸಭಾಭವನದಲ್ಲಿಸೋಮವಾರದಂದು ನಡೆಯಿತು. ನೂತನ ಅಧ್ಯಕ್ಷ ಸಾಯಿನಾಥ ಶೆಟ್ಟಿ ಹಾಗೂ ಕಾರ್ಯದರ್ಶಿ ಪ್ರಕಾಶ್ ಆಚಾರ್ ತಂಡಕ್ಕೆ ರೋಟರಿ ಜಿಲ್ಲೆಯ ನಿಯೋಜಿತ ಗವರ್ನರ್ ಸತೀಶ್ ಬೋಳಾರ್ ಪದಪ್ರದಾನ ನೆರವೇರಿಸಿದರು.ಇದೇ ಸಂದರ್ಭ ಕಿನ್ನಿಗೋಳಿ ರೋಟರಿ ಪ್ರವರ್ತಿತ 12 ಇಂಟರಾಕ್ಟ್ ಶಾಲೆಯ ಎಸ್ಎಸ್ಎಲ್ ಸಿ ಯ ಗರಿಷ್ಠ ಸಾದಕರಿಗೆ ಪ್ರತಿಭಾ ಪುರಸ್ಕಾರ ,ಪಿಯುಸಿ ಯ ಸಾಧಕರಿಗೆ ಗೌರವಾರ್ಪಣೆ, ರೋಟರಿ ಸದಸ್ಯರ ಶಿಕ್ಷಣ ಕ್ಷೇತ್ರದ ಸಾಧಕ ಮಕ್ಕಳಾದ ವೈಷ್ಣವಿ ದೇವಿಪ್ರಸಾದ್ , ಲಿಯೋರಾ ಮಿನೇಜಸ್,ಸಮನ್ವಿ ಸಂತೋಷ್ ರವರಿಗೆ ಗೌರವ,ವಿವಿಧ ಫಲಾನುಭವಿಗಳಿಗೆ ವೈದ್ಯಕೀಯ ನೆರವು,ವೀಲ್ ಚೇರ್ ನೀಡಲಾಯಿತು.
ಸಂಸ್ಥೆಯ ಮುಖವಾಣಿ ಹೆರಿಕ್ ಪಾಯಸ್ ಸಂಪಾದಕತ್ವದ ಸಿಂಚನವನ್ನು ರೋಟರಿ ವಲಯ ಒಂದರ ಸಹಾಯಕ ಗವರ್ನರ್ ರಾಬರ್ಟ್ ರೇಗೋ ಬಿಡುಗಡೆಗೊಳಿಸಿದರು.ಅಭಿಲಾಷ್ ಶೆಟ್ಟಿಯವರನ್ನು ನೂತನ ಸದಸ್ಯರಾಗಿ ಸೇರ್ಪಡೆಗೊಳಿಸಲಾಯಿತು . ರೋಟರಿ ಶಾಲೆಯ ಕಾರ್ಯದರ್ಶಿ ವಿಲಿಯಂ ಸಿಕ್ವೇರವರನ್ನು ಅಭಿನಂದಿಸಲಾಯಿತು.
ಈ ಸಂದರ್ಭ ಕಟೀಲು ಶ್ರೀ ದುರ್ಗಾಪರಮೇಶ್ವರೀ ಪದವಿ ಪೂರ್ವ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ರೋ.ಎಂ ಬಾಲಕೃಷ್ಣ ಶೆಟ್ಟಿ,ವಲಯ ಸೇನಾನಿ ತ್ಯಾಗರಾಜ ಆಚಾರ್ಯ,ನಿರ್ಗಮನಾಧ್ಯಕ್ಷ ಧನಂಜಯ ಶೆಟ್ಟಿಗಾರ್, ನಿರ್ಗಮನ ಕಾರ್ಯದರ್ಶಿ ಗಣೇಶ್ ಶೆಟ್ಟಿಗಾರ್ ಮತ್ತಿತರರಿದ್ದರು.ಧನಂಜಯ ಶೆಟ್ಟಿಗಾರ್ ಸ್ವಾಗತಿಸಿದರು.ಹೆರಿಕ್ ಪಾಯಸ್,ಶೈಲಾ ಸಿಕ್ವೇರ,ವಿಲಿಯಂ ಕಾರ್ಡೋಜಾ ಅತಿಥಿ ಪರಿಚಯ ಮಾಡಿದರು.ಪ್ರಕಾಶ್ ಆಚಾರ್ ವಂದಿಸಿ,ಶರತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.