ಸೇವಾ ಚಟುವಟಿಕೆಗಳೊಂದಿಗೆ ಮಾನವೀಯ ಸಂಬಂಧವನ್ನು ಬೆಳೆಸುವುದೆ ಲಯನ್ಸ್ ಸಂಸ್ಥೆಯ ಉದ್ದೇಶ ಲ. ವೆಂಕಟೇಶ ಹೆಬ್ಬಾರ್
Friday, July 18, 2025
ಮುಲ್ಕಿ: ಲಯನ್ಸ್ ಕ್ಲಬ್ ಛೋಟಾ ಮಂಗಳೂರು ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಕೋಟೆಕಾರ್ ಬೀರಿ ಕುಲಾಲ ಸಭಾಭವನದಲ್ಲಿ ಜರಗಿತು.ಈ ಸಂದರ್ಭ ಮಾತನಾಡಿದ ಅಂತರಾಷ್ಟ್ರೀಯ ಲಯನ್ಸ್ ವಿಚಾರಗಳ ಮುಖ್ಯ ಸಂಯೋಜಕ ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ಪೈರ್ನ ಸ್ಥಾಪಕ ಅಧ್ಯಕ್ಷ ಲ. ವೆಂಕಟೇಶ್ ಹೆಬ್ಬಾರ್ ಅವರು ಸೇವೆಯಲ್ಲಿ ನಾವು ತೃಪ್ತಿ ಕಾಣಬೇಕು. ಸೇವಾ ಚಟುವಟಿಕೆಗಳೊಂದಿಗೆ ಮಾನವೀಯ ಸಂಬಂಧವನ್ನು ಬೆಳೆಸುವುದೆ ಲಯನ್ಸ್ ಸಂಸ್ಥೆಯ ಉದ್ದೇಶ. ಗಳಿಕೆಯ ಒಂದು ಅಂಶವನ್ನು ಸೇವೆಗಾಗಿ ಮುಡಿಪಾಗಿಡಬೇಕು .32 ವರ್ಷಗಳ ಹಿರಿಯ ಲಯನ್ ಸಂಸ್ಥೆಯು ಲಯನ್ಸ್ ಜಿಲ್ಲೆಯಲ್ಲಿ ಉತ್ತಮ ಸೇವಾ ಕಾರ್ಯಕ್ರಮಗಳನ್ನು ಮಾಡಿ ಜಿಲ್ಲೆಯಲ್ಲಿ ಮಾದರಿ ಸಂಸ್ಥೆಯಾಗಿದೆ ಎಂದರು.
ಕೊಲ್ಯ ಕುಲಾಲ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಛೋಟಾ ಮಂಗಳೂರು ಲಯನ್ಸ್ ಕ್ಲಬ್ಬಿನ 2025-26ನೇ ಸಾಲಿನ ನೂತನ ಅಧ್ಯಕ್ಷ- ಪದಾಧಿಕಾರಿಗಳ ಪದಗ್ರಹಣ ನಡೆಯಿತು. ಲ. ವೆಂಕಟೇಶ್ ಹೆಬ್ಬಾರ್ ಅವರು ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳಿಗೆ ಪ್ರಮಾಣ ವಚನ ಭೋಧಿಸಿದರು.
ಹರಿಣಾಕ್ಷಿ ಕೊಲ್ಯ ಅವರು ನೂತನ ಅಧ್ಯಕ್ಷರಾಗಿ ದೀಪ ಬೆಳಗಿಸಿ ಅಧಿಕಾರ ಸ್ವೀಕರಿಸಿ ಮಾತನಾಡಿ ತನ್ನ ಅಧಿಕಾರ ಅವಧಿಯಲ್ಲಿ ಆದಷ್ಟು ಸಾಮಾಜಿಕ ಸೇವಾ ಚಟುವಟಿಕೆಗಳನ್ನೂ ಅರ್ಥಪೂರ್ಣವಾಗಿ ನಡೆಸಿ, ಛೋಟಾ ಮಂಗಳೂರು ಲಯನ್ಸ್ ಕ್ಲಬ್‍ನ್ನು ಇನ್ನಷ್ಟು ಅಭಿವೃದ್ಧಿಯಲ್ಲಿ ಮುಂದುವರೆಸುವ ಪ್ರಯತ್ನ ಮಾಡುತ್ತೇನೆ ಎಂದರು.
ಇಬ್ಬರು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಪ್ರತಿಭಾ ಪುರಸ್ಕಾರ, ಅರ್ಹ ಕುಟುಂಬಕ್ಕೆ ವೈದ್ಯಕೀಯ ವೆಚ್ಚದ ನೆರವು ಸೇವಾ ಚಟುವಟಿಕೆಯಾಗಿ ವಿತರಿಸಲಾಯಿತು.
ಉಳ್ಳಾಲ ವೀರರಾಣಿ ಅಬ್ಬಕ್ಕ ಪ್ರಶಸ್ತಿ ಪುರಸ್ಕೃತೆ ಹಿರಿಯ ಸಾಮಾಜಿಕ ಕಾರ್ಯಕರ್ತೆ ಸುಹಾಸಿನಿ ಬಬ್ಬು ಕಟ್ಟೆ ಡಿ ಎಮ್, ಉನ್ನತ ವೈದ್ಯಕೀಯ ಪರೀಕ್ಷೆಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ 2ನೇ ಸ್ಥಾನ ಪಡೆದ ಡಾ. ಶಶಾಂಕ್ ಪರವಾಗಿ ಅವರ ತಂದೆ- ತಾಯಿ ಶ್ರೀಮತಿ ಶೋಭಾ ಆನಂದ್ ದಂಪತಿಗಳಿಗೆ, ಬೀಡಿ ಉದ್ಯಮದ ಅದ್ಯಯನ ಸಂಶೋಧನ ಪ್ರಬಂಧಕ್ಕಾಗಿ ಡಾಕ್ಟರೇಟ್ ಪಡೆದ ಡಾ. ಹರಿಣಾಕ್ಷಿ ಸುವರ್ಣ ಕುಂಪಲ, ಸಿ.ಎ ಪದವಿಯನ್ನು ಒಂದೇ ಹಂತದಲ್ಲಿ ಪೂರೈಸಿದ ಕು. ಹಂಶಿತಾ ಇವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.
ಪದಗ್ರಹಣ ನಡೆಸಿಕೊಟ್ಟ ವೆಂಕಟೇಶ್ ಹೆಬ್ಬಾರ್ ಶ್ರೀಮತಿ ಪ್ರತಿಭಾ ಹೆಬ್ಬಾರ್ ದಂಪತಿಗಳನ್ನು, ಛೋಟಾ ಮಂಗಳೂರುಲಯನ್ಸ್ ಕ್ಲಬ್ ಸದಸ್ಯೆ, ಪ್ರಾಂತೀಯಾ ಅಧ್ಯಕ್ಷರಾಗಿ, ಉಳ್ಳಾಲ ವಲಯ ಬಂಟರ ಸಂಘದ ಉಪಾಧ್ಯಕ್ಷರಾಗಿ ಆಯ್ಕೆಯಾದ ಮಲ್ಲಿಕಾ .ಎಸ್. ಭಂಡಾರಿ, ಹಾಗೂ ಛೋಟಾ ಮಂಗಳೂರು ಲಯನ್ಸ್ ಕ್ಲಬ್ಬಿನ ಅಧ್ಯಕ್ಷ ಹರಿಣಾಕ್ಷಿ ಕೊಲ್ಯ ಇವರನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು.
ವಲಯಾಧ್ಯಕ್ಷೆ ಜೆಸಿಂತಾ ಮೆಂಡೊನ್ಸಾ ಉಪಸ್ಥಿತರಿದ್ದರು. ಪ್ರಜ್ಞಾ ಭಂಡಾರಿ ಪ್ರಾರ್ಥಿಸಿದರು. ಸರಿತಾ ಮಹೇಶ್ ಧ್ವಜವಂದನೆಗೈದರು. ಮಹೇಶ್ ನೀತಿ ಸಂಹಿತೆ ವಾಚಿಸಿದರು. ನಿರ್ಗಮನ ಉಪಾಧ್ಯಕ್ಷೆ ಭಾನುಮತಿ ಸ್ವಾಗತಿಸಿದರು. ಸತೀಶ್ ಭಂಡಾರಿ ನೂತನ ಸದಸ್ಯರನ್ನು ಪರಿಚಯಿಸಿದರು. ವಕೀಲ ಕೆ. ಸಿ ನಾರಾಯಣನ್ ಅತಿಥಿಗಳನ್ನು ಪರಿಚಯಿಸಿದರು. ಗೀತಾ ಸಂದೀಪ್ ಹೆಗ್ಡೆ, ಪ್ರಕಾಶ್ ಗಟ್ಟಿ, ಡಾ. ರವಿವರ್ಮ ಆಳ್ವ ನೂತನ ಅಧ್ಯಕ್ಷ, ಕಾರ್ಯದರ್ಶಿ, ಕೋಶಾಧಿಕಾರಿಗಳನ್ನು ಪರಿಚಯಿಸಿದರು. ಬಿ.ಬಿ. ಶೆಟ್ಟಿ ಮತ್ತು ನಮಿತಾ ಶ್ಯಾಮ್ ಅಭಿನಂದಿತರ ಪರಿಚಯಿಸಿದರು. ನಿಶಾಂತ್ ಕುಮಾರ್ ಶೆಟ್ಟಿ ಸೇವಾಯೋಜನೆಯ ವಿವರ ನೀಡಿದರು. ವಿದ್ಯಾಧರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಕಮಲಗೌಡ ವಂದಿಸಿದರು.