ನೆಟ್ಟ ಗಿಡಗಳನ್ನು ಸಂರಕ್ಷಿಸೋಣ - ಹೇಮನಾಥ ಅಮೀನ್
Friday, July 18, 2025
ಹಳೆಯಂಗಡಿ:ನೆಟ್ಟ ಗಿಡಗಳನ್ನು ಸಂರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಪಡುಪಣಂಬೂರು ಗ್ರಾಮ ಪಂಚಾಯತ್ ನ ಉಪಾಧ್ಯಕ್ಷ ಹೇಮನಾಥ ಅಮೀನ್ ಹೇಳಿದರು. ಅವರು ಮೈ ಭಾರತ್ ನೆಹರು ಯುವ ಕೇಂದ್ರ ದ.ಕ ಜಿಲ್ಲೆ, ಗ್ರಾಮೀಣ ಮಾಹಿತಿ ತಂತ್ರಜ್ಞಾನ ಯುವ ಅಭಿವೃದ್ಧಿ ಕೇಂದ್ರ, ಜಿಲ್ಲಾ ಮತ್ತು ರಾಜ್ಯ ಪ್ರಶಸ್ತಿ ವಿಜೇತ ಯುವಕ ಸಂಘ ತೋಕೂರು, ಮಹಿಳಾ ಮಂಡಲ ತೋಕೂರು ಹಾಗೂ ರೋಟರಿ ಸಮುದಾಯ ದಳ ತೋಕೂರು ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ವನಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಈ ಸಂದರ್ಭ ಯುವಕ ಸಂಘದ ಅಧ್ಯಕ್ಷ ವಾಮನ ಎಸ್ ದೇವಾಡಿಗ, ಮಹಿಳಾ ಮಂಡಲದ ಅಧ್ಯಕ್ಷೆ ಪ್ರಪುಲ್ಲಾ ಆರ್ ಶೆಟ್ಟಿ, ರೋಟರಿ ಸಮುದಾಯ ದಳದ ಅಧ್ಯಕ್ಷ ಪರಮೇಶ್ವರ್ ಶೆಟ್ಟಿಗಾರ್, ವಿಶ್ವ ಬ್ಯಾಂಕ್ ನೀರು ಸರಬರಾಜು ಸಮಿತಿಯ ಅಧ್ಯಕ್ಷ ಪುರುಷೋತ್ತಮ ಸಿ ಕೋಟ್ಯಾನ್, ವೇದ ಹರಿಶ್ಚಂದ್ರ ಶೆಟ್ಟಿಗಾರ್, ಗೋಪಾಲ ಮೂಲ್ಯ, ಹರಿದಾಸ್ ಭಟ್ ಹಾಗೂ ಜಂಟಿ ಸಂಸ್ಥೆಗಳ ಸದಸ್ಯರುಗಳು ವನಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.