ಕೆರೆಕಾಡು ಶ್ರೀ ದುರ್ಗಾಪರಮೇಶ್ವರೀ ಭಜನಾ ಮಂದಿರದ ಅಧ್ಯಕ್ಷರಾಗಿ ರಾಜೇಶ್ ಪಿ.ಆರ್. ಆಯ್ಕೆ.
Saturday, July 12, 2025
ಮೂಲ್ಕಿ : ಕೆರೆಕಾಡು ಶ್ರೀ ದುರ್ಗಾಪರಮೇಶ್ವರೀ ಭಜನಾ ಮಂದಿರದ 2025-27ನೇ ಸಾಲಿನ ನೂತನ ಅಧ್ಯಕ್ಷರಾಗಿ ರಾಜೇಶ್ ಪಿ.ಆರ್. ಅವರು ಆಯ್ಕೆಯಾಗಿದ್ದಾರೆ.
ಭಜನಾ ಮಂದಿರದಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷ ಅನಂತ ಪದ್ಮನಾಭ ಶೆಟ್ಟಿಗಾರ್ ಅವರ ಅಧ್ಯಕ್ಷತೆಯಲ್ಲಿ ನಡೆದು, ನೂತನ ಪದಾಧಿಕಾರಿಗಳನ್ಬು ಆಯ್ಕೆ ಮಾಡಲಾಯಿತು.
ಗೌರವಾಧ್ಯಕ್ಷರಾಗಿ
ಪಟೇಲ್ ವಾಸುದೇವ ರಾವ್ ಪುನರೂರು, ಉಪಾಧ್ಯಕ್ಷರಾಗಿ
ಕರುಣಾಕರ ಕುಂದರ್ , ರತ್ನ ಶಿವಾನಂದ್, ರವೀಂದ್ರ ದೇವಾಡಿಗ,
ಪ್ರಧಾನ ಕಾರ್ಯದರ್ಶಿಯಾಗಿ ಸುರೇಂದ್ರ. ಬಿ, ಜೊತೆ ಕಾರ್ಯದರ್ಶಿಗಳಾಗಿ
ಚೇತನ್ ಪುನರೂರು, ಸತೀಶ್ ಶೆಟ್ಟಿಗಾರ್, ಕೋಶಾಧಿಕಾರಿಯಾಗಿ ನವ್ಯಶ್ರೀ,
ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ಹರೀಶ್ ಪದ್ಮಶಾಲಿ, ಸುರೇಖಾ ಕರುಣಾಕರ ಕುಂದರ್.
ಮಾತೃ ಮಂಡಳಿ ಸಂಚಾಲಕರಾಗಿ ಲಲಿತಾ ಭಾಸ್ಕರ್, ದಮಯಂತಿ ಶೆಟ್ಟಿಗಾರ್, ಸೌಮ್ಯ ರಾಘವೇಂದ್ರ ರಾವ್,
ಭಜನಾ ಸಂಚಾಲಕರಾಗಿ ಚೇತನ್ ಪುನರೂರು, ಅಭಿಷೇಕ್ ರಾವ್, ಯೋಗಾನಂದ ಶೆಟ್ಟಿಗಾರ್, ಶೋಭಾ ಶಿವರಾಮ ಆಚಾರ್ಯ, ಭಾರತಿ ಯೋಗಾನಂದ ಆಯ್ಕೆಯಾಗಿದ್ದಾರೆ.