ದಾಮಸ್ಕಟ್ಟೆ - ಏಳಿಂಜೆ ತನಕ ಹೆದ್ದಾರಿ ಹೊಂಡಮಯ
Saturday, July 12, 2025
ಕಿನ್ನಿಗೋಳಿ:ದಾಮಸ್ಕಟ್ಟೆಯ ಎಸ್ ವಿಡಿ ಸಮೀಪದಿಂದ ಏಳಿಂಜೆ ತನಕ ರಾಜ್ಯ ಹೆದ್ದಾರಿಯಲ್ಲಿ ಅಲ್ಲಲ್ಲಿ ಹೊಂಡಗಳು ಉಂಟಾಗಿದ್ದು,ವಾಹನಗಳ ಸವಾರರಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ.ಮೂರುಕಾವೇರಿಯಿಂದ ದಾಮಸ್ಕಟ್ಟೆ ತನಕ ಹೆದ್ದಾರಿಯು ಆಗಲೀಕರಣ ಗೊಂಡು ಡಾಮರೀಕರಣ ಗೊಂಡಿದೆ.ಆದರೆ ದಾಮಸ್ಕಟ್ಟೆಯ ಎಸ್ ವಿಡಿ ಸಮೀಪದಿಂದ ಏಳಿಂಜೆ ತನಕ ರಾಜ್ಯ ಹೆದ್ದಾರಿಯು ಆಗಲೀಕರಣಗೊಳ್ಳದೆ ಹಾಗೇಯೇ ಉಳಿದಿದೆ.ಅಲ್ಲದೆ ಏಳಿಂಜೆಯಿಂದ ಸಂಕಲಕರಿಯ ಸೇತುವೆಯ ತನಕವೂ ಹೆದ್ದಾರಿ ಆಗಲೀಕರಣಗೊಂಡು ಡಾಮರೀಕರಣಗೊಂಡಿದೆ.ಆದರೆ ದಾಮಸ್ಕಟ್ಟೆಯ ಎಸ್. ವಿ.ಡಿಯಿಂದ ಏಳಿಂಜೆ ತನಕ ಯಾವುದೇ ಕಾಮಗಾರಿ ನಡೆಯದೆ ಹೆದ್ದಾರಿಯುದ್ದಕ್ಕೂ ಹೊಂಡಗಳೇ ಇದ್ದು ವಾಹನಗಳ ಸವಾರರು ದಿನಂಪ್ರತಿ ಸಮಸ್ಯೆಯನ್ನು ಅನುಭವಿಸುವಂತಾಗಿದೆ.