-->
ಪದ್ಮಶಾಲಿ ಕೋ - ಅಪರೇಟಿವ್  ಸೊಸೈಟಿ ಲಿ.  ಉದ್ಘಾಟನೆ

ಪದ್ಮಶಾಲಿ ಕೋ - ಅಪರೇಟಿವ್ ಸೊಸೈಟಿ ಲಿ. ಉದ್ಘಾಟನೆ

ಕಿನ್ನಿಗೋಳಿ :ಮುಲ್ಕಿ ಅರಮನೆಗೂ ಪದ್ಮಶಾಲಿ ಸಮಾಜಕ್ಕೂ ನಿರಂತರ ಅವಿನಾಭಾವ ಸಂಬಂಧ ಇದೆ. ಶ್ರಮಜೀವಿಗಳಾದ  ಅವರು ಸರಕಾರದ ಅನುದಾನಗಳಿಗೆ ಕಾಯದೆ ಕಾಯಕದಲ್ಲಿ ತೊಡಗಿರುತ್ತಾರೆ.ಉತ್ತಮ ಗುಣ ಮಟ್ಟದ ಉತ್ಪಾದನೆಗೆ ಈ ಸಮಾಜ ಹೆಸರುವಾಸಿಯಾಗಿದ್ದು ಇದೀಗ ಬದುಕಿಗೆ ಪರ್ಯಾಯ ಮಾರ್ಗವಾಗಿ ಈ ಸೊಸೈಟಿಯ ನ್ನು ಸಮಾಜಕ್ಕೆ ಅರ್ಪಿಸುತ್ತಿರುವುದು ಶ್ಲಾಘನೀಯ ಎಂದು ಮುಲ್ಕಿ ಸೀಮೆಯ ಅರಸರಾದ ದುಗ್ಗಣ್ಣ ಸಾವಂತರು ಹೇಳಿದರು. ಅವರು ಕಿನ್ನಿಗೋಳಿ ಬಟ್ಟಕೋಡಿಯ ಮುರತ್ತಮೇಲ್ ಕಾಂಪ್ಲೆಕ್ಸ್ ನಲ್ಲಿ ನೂತನವಾಗಿ ಶುಭಾರಂಭಗೊಂಡ ಪದ್ಮಶಾಲಿ ಕೋ - ಅಪರೇಟಿವ್  ಸೊಸೈಟಿ ಲಿ. ನ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದ ಅನುವಂಶಿಕ ಮೊಕ್ತೇಸರ ಹರಿನಾರಾಯಣ ದಾಸ ಆಸ್ರಣ್ಣ ಅವರು  ಆಶೀರ್ವಚನ ನೀಡಿ,ಸಂಘದಿಂದ ಸಂಘಟನೆ ಸಾಧ್ಯ,ಈ ಸೊಸೈಟಿ ಎಲ್ಲರನ್ನು ಒಟ್ಟುಗೂಡಿಸುವ ಕೇಂದ್ರವಾಗಲಿ ಎಂದರು.ಶಿಬರೂರು ವೇದವ್ಯಾಸ ತಂತ್ರಿಗಳು ಶುಭಾಶಸಂಸನೆಗೈದರು.ಭದ್ರತಾ ಕೊಠಡಿಯನ್ನು ಅತ್ತೂರುಬೈಲು ವೆಂಕಟರಾಜ ಉಡುಪ ಉದ್ಘಾಟಿಸಿದರು.ಕಿನ್ನಿಗೋಳಿ ದುರ್ಗಾದಯಾ ದ  ಸೀತಾರಾಮ ಶೆಟ್ಟಿ ಆಡಳಿತ ಕಛೇರಿಯನ್ನು  ಉದ್ಘಾಟಿಸಿದರು.ದಕ್ಷಿಣ ಕನ್ನಡ ಪದ್ಮಶಾಲಿ ಮಹಾಸಭಾ ಮಂಗಳೂರು ಇದರ ಅಧ್ಯಕ್ಷ ರವಿ ಶೆಟ್ಟಿ ಗಾರ್ ಕಾರ್ಕಳ ಕಾರ್ಯಕ್ರಮವನ್ನು  ಉದ್ಘಾಟಿಸಿದರು.ಕಿನ್ನಿಗೋಳಿಯ ಉದ್ಯಮಿ ಪೃಥ್ವಿರಾಜ್  ಠೇವಣಿ ಪತ್ರ ಬಿಡುಗಡೆಗೊಳಿಸಿದರು.ಪಾಲು ಬಂಡವಾಳ ಪತ್ರವನ್ನು ಭುವನಾಭಿರಾಮ ಉಡುಪ ಬಿಡುಗಡೆಗೊಳಿಸಿದರು.ರಾಮ ಮಂದಿರ ಕಿನ್ನಿಗೋಳಿ ಅಧ್ಯಕ್ಷ ರಾಜೇಶ್ ನಾಯಕ್ ಉಳಿತಾಯ ಖಾತೆ ಪಾಸ್ ಪುಸ್ತಕ ವಿತರಣೆ ಮಾಡಿದರು.
ಈ ಸಂದರ್ಭ ಪಟೇಲ್ ವಾಸುದೇವ ರಾವ್,ಕೆ.ಲವ ಶೆಟ್ಟಿ,
ಹಳೆಯಂಗಡಿ ವೀರಭದ್ರ ಮಹಾಮ್ಮಾಯೀ ದೇವಳದ ಗುರಿಕಾರ ರತ್ನಾಕರ ಯಾನೆ ಕಾಂತಣ್ಣ ಗುರಿಕಾರ್ ,ಗುತ್ತಕಾಡು ಬಿಲ್ಲವ ಸಂಘದ ಅಧ್ಯಕ್ಷ ಕುಶಲ ಪೂಜಾರಿ,ಬೋಳೂರು ಶ್ರೀ ವೀರಭದ್ರ  ಮಹಾಮ್ಮಾಯೀ ದೇವಳದ ಬಾಲಕೃಷ್ಣ ಕಲ್ಬಾವಿ,ಮುಲ್ಕಿ ಮಾನಂಪಾಡಿ ದೇವಳದ ಮೊಕ್ತೇಸರ ಭಾಸ್ಕರ ಆರ್ ಶೆಟ್ಟಿ ಗಾರ್,ಸುರತ್ಕಲ್  ವೀರಭದ್ರ ದೇವಳದ ಅಧ್ಯಕ್ಷ ಓಂ ಪ್ರಕಾಶ್ ಶೆಟ್ಟಿ ಗಾರ್,ಸೊಸೈಟಿ ಯ ಉಪಾಧ್ಯಕ್ಷೆ ಚಂದ್ರಕಲಾ ಕೆ.ಶೆಟ್ಟಿ ಗಾರ್,ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜ್ಯೋತಿ ಅಶೋಕ್,ನಿರ್ದೇಶಕರಾದ ಧನಂಜಯ ಪಿ.ಶೆಟ್ಟಿಗಾರ್, ಪ್ರೇಮಾನಂದ ಶೆಟ್ಟಿಗಾರ್, ಲಕ್ಷ್ಮಣ್ ಕೆ.,ಗೋಪಾಲ ಎಂ.ಶೆಟ್ಟಿಗಾರ್, ಎಲ್.ರಮೇಶ್ ಶೆಟ್ಟಿಗಾರ್, ಸೀತಾರಾಮ ಶೆಟ್ಟಿಗಾರ್,ಸುಂದರ ಶೆಟ್ಟಿಗಾರ್, ಪುಂಡಲೀಕ ಶೆಟ್ಟಿಗಾರ್, ವಸಂತ ಶೆಟ್ಟಿಗಾರ್, ಧನರಾಜ್ ಸಿ.ಶೆಟ್ಟಿಗಾರ್, ಕುಶಲ ಎನ್.ಶೆಟ್ಟಿಗಾರ್ ಮತ್ತಿತರರಿದ್ದರು.ಸೊಸೈಟಿ ಯ ಅಧ್ಯಕ್ಷ ಪುರಂದರ ಡಿ.ಶೆಟ್ಟಿಗಾರ್ ಸ್ವಾಗತಿಸಿದರು.ಧನಂಜಯ ಪಿ.ಶೆಟ್ಟಿಗಾರ್ ವಂದಿಸಿದರು.ಮಂಗಳೂರು ನಾರಾಯಣ ಶೆಟ್ಟಿಗಾರ್ ಕಾರ್ಯಕ್ರಮ ನಿರೂಪಿಸಿದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ