ದೇವಾಡಿಗ ಸಮಾಜ ಸೇವಾ ಸಂಘ(ರಿ)ಪಾವಂಜೆ ವತಿಯಿಂದ ಕುಟುಂಬಕ್ಕೆ ಧನ ಸಹಾಯ
Tuesday, July 22, 2025
ಕಿನ್ನಿಗೋಳಿ :ದೇವಾಡಿಗ ಸಮಾಜ ಸೇವಾ ಸಂಘ(ರಿ)ಪಾವಂಜೆ ಇದರ ವತಿಯಿಂದ ವನಿತಾ ದೇವಾಡಿಗ ಐಕಳ ಇವರ ಮನವಿಗೆ ಸ್ಪಂದಿಸಿ,ಮನೆಗೆ ಭೇಟಿ ಕೊಟ್ಟು ಅವರ ಸ್ಥಿತಿ ಗತಿಯನ್ನು ಪರೀಕ್ಷಿಸಿ ' ಆಪತ್ಭಾಂದವನಿಧಿ' ಯಿಂದ ರೂ 10,000/- ವನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಅಣ್ಣಪ್ಪ ದೇವಾಡಿಗ, ಕಟ್ಟಡ ಸಮಿತಿಯ ಕಾರ್ಯಧ್ಯಕ್ಷ ಯಾದವ ದೇವಾಡಿಗ, ದೇವಾಡಿಗ ಸೇವಾ ಟ್ರಸ್ಟಿನ ಅಧ್ಯಕ್ಷ ರಮೇಶ್ ಕುಮಾರ್ ತೋಕೂರು ಕಟ್ಟಡ ಸಮಿತಿ ಕಾರ್ಯದರ್ಶಿ ಜನಾರ್ದನ ಪಡುಪಣಂಬೂರು, ಸಂಘಟನಾ ಕಾರ್ಯದರ್ಶಿವಾಮನ ದೇವಾಡಿಗ ತೋಕೂರು ಉಪಸ್ಥಿತರಿದ್ದರು.