ಸಂಘ ಸಂಸ್ಥೆಗಳ ಕಾರ್ಯ ಶ್ಲಾಘನೀಯ - ಉಮಾನಾಥಕೋಟ್ಯಾನ್
Tuesday, July 1, 2025
ಕಿನ್ನಿಗೋಳಿ :ಸಮಾಜದ ಬಡವರ್ಗಕ್ಕೆ ಸಹಕಾರ ನೀಡಿ ಅವರನ್ನು ಪ್ರೋತ್ಸಾಹಿಸುತ್ತಿರುವ ಸಂಘ ಸಂಸ್ಥೆಗಳ ಕಾರ್ಯ ಶ್ಲಾಘನೀಯ ಎಂದು ಮೂಲ್ಕಿ ಮೂಡಬಿದಿರೆ ಶಾಸಕ ಉಮನಾಥ ಕೋಟ್ಯಾನ್ ಹೇಳಿದರು.
ಅವರು ಕಿನ್ನಿಗೋಳಿ ಸಮೀಪದ ಪುನರೂರು ಬಳಿಯ ಬಾಬಕೋಡಿ ಶ್ರೀ ಅದಿಶಕ್ತಿ ನಾಗಕನ್ನಿಕಾ ದೇವಸ್ಥಾನದಲ್ಲಿ ಕಿನ್ನಿಗೋಳಿ ಜೆ. ಬಿ. ಫ್ರೆಂಡ್ಸ್ ಮತ್ತು ಗ್ರಾಮದ ದಾನಿಗಳ ಸಹಕಾರದಲ್ಲಿ ನಡೆದ ಪುನರೂರು ಭಾರತಮಾತ ಶಾಲೆ, ಪದ್ಮನೂರು, ಉಲ್ಲಂಜೆ ಶಾಲಾ ಮಕ್ಕಳಿಗೆ ಉಚಿತ ಛತ್ರಿ ವಿತರಣೆ ಹಾಗೂ ಚಿಕಿತ್ಸಾ ವೆಚ್ಚಕ್ಕೆ ಅರ್ಥಿಕ ಸಹಾಯ ನೀಡುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಶಿವಪ್ರಸಾದ್ ಗುತ್ತಕಾಡು ಹಾಗೂ ಅಂಬುಲೆನ್ಸ್ ಚಾಲಕ ಅಲ್ವಿನ್ ಸುವರಿಸ್ ರನ್ನು ಗೌರವಿಸಲಾಯಿತು. ಸುಮಾರು ನಾಲ್ಕು ಮಂದಿಗೆ ವೈದ್ಯಕೀಯ ಚಿಕಿತ್ಸೆ ಹಾಗೂ ಶಿಕ್ಷಣಕ್ಕೆ ಅರ್ಥಿಕ ಸಹಾಯ ನೀಡಲಾಯಿತು.
ಈ ಸಂದರ್ಭ ಉದ್ಯಮಿ ಪೃಥ್ವಿರಾಜ ಆಚಾರ್ಯ, ಕಿನ್ನಿಗೋಳಿಯ ಯುಗಪುರುಷದ ಸಂಪಾದಕ ಭುವನಾಭಿರಾಮ ಉಡುಪ, ವಸಂತಿ, ಶೇಷಪ್ಪ ಮಡಿವಾಳ, ಸಂಸ್ಥೆಯ ಅಧ್ಯಕ್ಷ ಸಂತೋಷ್ ಶೆಟ್ಟಿ ಪುನರೂರು, ಕಾರ್ಯದರ್ಶಿ ನಿಶಾನ್ ಕ್ವಾಡ್ರಸ್ ಮತ್ತಿತರರು ಉಪಸ್ಥಿತರಿದ್ದರು.