-->
ಕನಾ೯ಟಕ ದಲಿತ ಸಂಘಷ೯ ಸಮಿತಿಯ ಸಂಸ್ಥಾಪಕ ಪ್ರೋ ಬಿ. ಕೃಷ್ಣಪ್ಪ ರವರ 87ನೇ ಜನ್ಮದಿನಾಚರಣೆ

ಕನಾ೯ಟಕ ದಲಿತ ಸಂಘಷ೯ ಸಮಿತಿಯ ಸಂಸ್ಥಾಪಕ ಪ್ರೋ ಬಿ. ಕೃಷ್ಣಪ್ಪ ರವರ 87ನೇ ಜನ್ಮದಿನಾಚರಣೆ

ಬಜಪೆ:ಕನಾ೯ಟಕ ದಲಿತ ಸಂಘರ್ಷ ಸಮಿತಿ (ರಿ)ಸ್ವಾಭಿಮಾನಿ ಪ್ರೋ. ಕೃಷ್ಣಪ್ಪ ಬಣ ಗ್ರಾಮ ಶಾಖೆ ಕೆಂಜಾರು ಇದರ ವತಿಯಿಂದ ಕನಾ೯ಟಕ ದಲಿತ ಸಂಘಷ೯ ಸಮಿತಿಯ ಸಂಸ್ಥಾಪಕ ಪ್ರೋ ಬಿ. ಕೃಷ್ಣಪ್ಪ ರವರ 87ನೇ ಜನ್ಮದಿನಾಚರಣೆ ಬಿಲ್ಲವ ಸಮಾಜ ಸೇವಾ ಸಂಘ ಕೆಂಜಾರು- ಪೇಜಾವರ-ತೋಕೂರು ಇದರ ಸಭಾಂಗಣದಲ್ಲಿ ನಡೆಯಿತು. ಕಾಯ೯ಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಂಗಳೂರು ತಾಲೂಕು ಸಮಿತಿಯ ಸಂಚಾಲಕ ರಾಘವೇಂದ್ರ ಅವರು  ಪ್ರೊ. ಬಿ.ಕೃಷ್ಣಪ್ಪರವರ ಹುಟ್ಟು ದಲಿತರ ಸ್ವಾಭಿಮಾನದ ಬದುಕಿನ ಆಶಾಕಿರಣವಾಗಿದೆ. ಕನಾ೯ಟಕದಲ್ಲಿ ಪ್ರೊ.  ಬಿ.ಕೆಯವರ ನೆನಪು ಶಾಶ್ವತ  ಅವರು ಅಂದು ಗುಡಿಸಲಲ್ಲಿ ಹಚ್ಚಿದ ಹೋರಾಟದ ಆ ಹಣತೆ ಇಂದಿಗೂ ಹಾರದಂತೆ ನೋಡಿಕೊಂಡಿದ್ದೇವೆ. ಮುಂದೆಯೂ ನೋಡಿಕೊಳ್ಳುವ ಅನಿವಾರ್ಯತೆ ಇದೆ.ದಲಿತರ ಬದುಕಿನ ಬದಲಾವಣೆಗೆ ಶ್ರಮಿಸಿದ ಹಲವಾರು ಹೋರಾಟಗಾರರಿದ್ದಾರೆ . ಅವರುಗಳ ಬಗ್ಗೆ ನಾವುಗಳು ತಿಳಿದು ಕೊಳ್ಳಬೇಕು.ನಮ್ಮ ಮಕ್ಕಳಿಗೂ ತಿಳಿಸಬೇಕು ಎಂದರು.
ದ.ಕ ಜಿಲ್ಲಾ ಸಂಚಾಲಕ  ಸದಾಶಿವ ಪಡುಬಿದ್ರಿ ಮಾತನಾಡಿ  ವಿಶ್ವ ಮಾನವ ಅಂಬೇಡ್ಕರ್ ನಮ್ಮ ಪಾಲಿನ ದೇವರು ಅವರನ್ನು ಪರಿಚಯಿಸಿದವರು ಪ್ರೊ. ಬಿ.ಕೃಷ್ಣಪ್ಪರವರು. ಬಿ. ಕೆ. ಯವರು ಹಳ್ಳಿ ಹಳ್ಳಿಗೂ ಪರಿಚಿತರು ಅವರ ಹೋರಾಟದ ಹಾದಿ ನಮಗೆ ಸ್ಪೂರ್ತಿ ಅವರನ್ನು ಮರೆತರೆ ನಾವು ಮುಂದೆ  ಗುಲಾಮರಂತೆ ಬದುಕಬೇಕಾದ ಸ್ಥಿತಿ ಬಂದೊದಗಬಹುದು ಎಂದರು.
 ಜಿಲ್ಲಾ ಸಂಘಟನಾ ಸಂಚಾಲಕ ರಘು.ಕೆ. ಎಕ್ಕಾರು ಮಾತನಾಡಿ ದಲಿತ ಸಂಘಟನೆ ಎಂದರೆ ಕೋಮು ಸಂಘಟನೆ ಅಲ್ಲ. ದಲಿತ ಸಂಘಟನೆ ಇರುವುದಕ್ಕೆ ನಾವು ಧೈರ್ಯದಿಂದ ಬದುಕು ಕಟ್ಟಿಕೊಂಡಿದ್ದೇವೆ.ಅದಕ್ಕೆ ಕಾರಣ ಪ್ರೊ. ಬಿ ಕೃಷ್ಣಪ್ಪ ರಂತಹ ಸಾಮಾಜಿಕ ಚಿಂತನಾಕಾರರ ಪರಿಶ್ರಮದಿಂದ ಮಾತ್ರ ಸಾಧ್ಯ ವಾಗಿದೆ.ಸಂಘಟನೆಯನ್ನು ಮೈಗೂಡಿಸಿಕೊಂಡು ಬದುಕುತ್ತಿರುವ ನಾವೆಲ್ಲಾ ಸ್ವಲ್ಪ ಮಟ್ಟಿಗೆ ನೆಮ್ಮದಿಯ ಜೀವನ ನಡೆಸುತ್ತಿದ್ದೇವೆ.  ಸಂಘಟನೆಯಿಂದ ದೂರ ಇರುವ ನಮ್ಮ ಸಮುದಾಯದ ಕೆಲವು ಯುವಕರು  ಕೋಮುವಾದಿ ಸಂಘಟನೆಗಳತ್ತ ಆಕರ್ಷತರಾಗಿ ಸಮಾಜದ ಸಾಮರಸ್ಯ ಕೆಡಿಸುವುದರ ಜೊತೆಗೆ ತಮ್ಮ ಉಜ್ವಲ ಭವಿಷ್ಯವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಮಕ್ಕಳಿಗೆ ಸಂಘಟನೆ ಹಾಗೂ ಸಾಮಾಜಿಕ ಪರಿವರ್ತನಕಾರರ ವಿಚಾರಗಳನ್ನು ತಿಳಿಸಿ,  ಹೆಚ್ಚಿನ ವಿದ್ಯಾಬ್ಯಾಸವನ್ನು ನೀಡಿ ವಿಚಾರವಂತರಾಗಿ ಮಾಡಿ ಸಮಾಜದಲ್ಲಿ ಒಳ್ಳೆಯ ಪ್ರಜೆಗಳಾಗುವ ಸಂಸ್ಕಾರವನ್ನು ಕಲಿಸಿ ಧಮ೯ಧಮ೯ಗಳ ನಡುವೆ ವಿಷ ಬಿತ್ತುವವರನ್ನು ಮೆಟ್ಟಿನಿಲ್ಲುವವರನ್ನಾಗಿ ಬೆಳೆಸುವ ಕಾರ್ಯವನ್ನು ನಮ್ಮ ಸಂಘಟನೆಯ ಪ್ರತಿಯೊಬ್ಬರೂ ಮಾಡಬೇಕು ಎಂದರು.
 ಕಾಯ೯ಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಲಿಂಗಪ್ಪ ಕುಂದರ್ ಮಾತಾಡಿ ಫ್ರೋ.ಕೃಪ್ಣಪ್ಪರವರು ಹುಟ್ಟು ಹಾಕಿದ ಸಂಘಟನೆಯಿಂದ ನಮ್ಮ ಗ್ರಾಮದ ದಲಿತರ ಬದುಕು ಬದಲಾವಣೆ ಯಾಗಿದೆ . ಸಮಸ್ಯೆಗಳಿಗೆ ಯಾವ ಜನಪ್ರತಿನಿಧಿಗಳಿಂದ ನೇರ ಬದಲಾವಣೆಯಾಗಿಲ್ಲ.ಅವರಿಗೆ ನಮ್ಮ ಜಾತಿ ಜನಾಂಗವನ್ನು ಉದ್ದಾರ ಮಾಡುವ ಮನಸ್ಥಿತಿಯೂ ಇಲ್ಲ, ದಲಿತ ಕುಟುಂಬಗಳು ಬದಲಾವಣೆ ಕಂಡಿವೆ ಅಂದರೆ ಅದು ಪ್ರೋಪೆಸರ್ ಬಿ.ಕೆ.ಹಚ್ಚಿದ ಹೋರಾಟದ ಹಣತೆ ಯಿಂದ ಸಾಧ್ಯವಾಗಿದೆ.ಇನ್ನೂ ಹಲವಾರು ಸಮಸ್ಯೆಗಳಿದೆ ಅದನ್ನು ಕೂಡ ಸಂಘಟನೆಯಿಂದ ಬಗೆಹರಿಸಿಕೊಳ್ಳಲು ಪ್ರಯತ್ನ ಮಾಡಬೇಕಾಗಿದೆ ಎಂದರು. ಕಾರ್ಯಕ್ರಮದ ವೇದಿಕೆಯಲ್ಲಿ ಜಿಲ್ಲಾ ಮಹಿಳಾ ಸಂಚಾಲಕಿ ಶ್ರೀಮತಿ ಸರೋಜಿನಿ ಬಂಟ್ವಾಳ, ಜಿಲ್ಲಾ ದಲಿತ ನೌಕರರ ಒಕ್ಕೂಟದ ಉಸ್ತುವಾರಿ ಹೆಚ್. ಡಿ. ಲೋಹಿತ್, ದಲಿತ ಕಲಾ ಮಂಡಳಿ ತಾಲೂಕು ಸಂಚಾಲಕ  ಗಂಗಾಧರ್ ಜೋಕಟ್ಟೆ, ತಾಲೂಕು ಸಂಘಟನಾ ಸಂಚಾಲಕ  ರುಕ್ಕಯ್ಯ ಅಮೀನ್ ಕರಂಬಾರು,ಎಕ್ಕಾರು ಗ್ರಾಮ ಸಂಚಾಲಕ  ಗಣೇಶ್ ಕೆಂಚಗುಡ್ಡೆ,ಗ್ರಾಮ ಪಂಚಾಯತ್ ಸದಸ್ಯ ಚೆನ್ನಪ್ಪ ಸಾಲ್ಯಾನ್  ಹಾಗೂ ಮುಂತಾದವರು ಉಪಸ್ಥಿತರಿದ್ದರು. ವೇದಿಕೆಯಲ್ಲಿ ಶಿಕ್ಷಣ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಅಪೂರ್ವ ಸಾಧನೆಗೈದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಕೃಷ್ಣ  ಕೆ ಎಕ್ಕಾರು ಕಾಯ೯ಕ್ರಮ ನಿರ್ವಹಿಸಿ ಜಾಗೃತಿಯವರು ಧನ್ಯವಾದವಿತ್ತರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ